

ಹುಬ್ಬಳ್ಳಿ: ಮನೆಯಂಗಳಕ್ಕೆ ಬಂದು ನಾಯಿ ಮರಿ ಸಾವಿಗೆ ಕಾರಣವಾಗಿದ್ದ ನಾಗರ ಹಾವನ್ನು ಸ್ನೇಕ್ ನಾಗರಾಜ್ ಹಿಡಿದು ಬೇರೆಡೆ ಸಾಗಿಸಿದ ಪ್ರಸಂಗ ಇತ್ತೀಚೆಗೆ ನವನಗರದಲ್ಲಿ ನಡೆದಿದೆ.
ಇಲ್ಲಿಯ ನವನಗರ ಶಿವಾನಂದ ನಗರದ ಮನೆ ಆವರಣಕ್ಕೆ ಬಂದಿದ್ದ ಹಾವು ನಾಯಿ ಮರಿಗೆ ಕಚ್ಚಿತ್ತು. ಇದರಿಂದ ನಾಯಿ ಮರಿ ಸಾವಿಗೀಡಾಗಿತ್ತು. ಹಾವು ಮನೆ ಆವರಣದಲ್ಲೇ ಇತ್ತು. ಇದನ್ನು ಕಂಡು ಗಾಬರಿಯಾದ ಮನೆ ಮಾಲೀಕರು, ಹಾವು ಹಿಡಿಸಬೇಕೆಂದು ನಿರ್ಧರಿಸಿದರು. ಅಮರಗೋಳದ ಸ್ನೇಕ್ ನಾಗರಾಜ್ ಅಪ್ಪಣ್ಣ ಅವರಿಗೆ ಫೋನ್ ಮಾಡಿ ಕರೆಸಿದಾಗ ಅವರು, ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.
ಸ್ನೇಕ್ ನಾಗರಾಜ್ ಅಮರಗೋಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ತರಹದ ಹಾವು ಕಂಡರೆ ಸ್ಥಳೀಯರು ಫೋನ್ ಮಾಡುತ್ತಾರೆ. ಆತ ಹಾವುಗಳನ್ನು ಉಚಿತವಾಗಿ ಹಿಡಿದು ಬೇರೆಡೆ ಕಳಿಸಿ ಜನರ ಭಯ ದೂರ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ನೇಕ್ ನಾಗರಾಜ್ ಸಂಪರ್ಕಕ್ಕೆ ಮೊ. 9164446147.