

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಫಾರ್ಮ್‌ಹೌಸ್‌ನಲ್ಲಿ ಸಿಕ್ಕ ಕೆರೆಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿದ ಬೆಂಗಳೂರು ಉತ್ತರ ತಾಲೂಕು ಕುದುರಗೆರೆ ಗ್ರಾಮದ ಸ್ನೇಕ್ ನಾಗೇಂದ್ರ, ಮೊಟ್ಟೆಗಳು ಮರಿಯೊಡೆದ ನಂತರ ಕಾಡಿಗೆ ಬಿಟ್ಟಿದ್ದಾರೆ. ಇತ್ತೀಚೆಗೆ ಗ್ರಾಮದ ಸುಬ್ರಹ್ಮಣ್ಯ ಾರ್ಮ್‌ಹೌಸ್‌ನಲ್ಲಿ ಕೆರೆಹಾವು ಕಾಣಿಸಿಕೊಂಡಿತ್ತು. ಈ ಕುರಿತು ದೊರೆತೆ ಮಾಹಿತಿ ಮೇರೆಗೆ ನಾಗೇಂದ್ರ ಕೆರೆ ಹಾವನ್ನು ಹಿಡಿದು ಮನೆಗೆ ತಂದಿದ್ದರು. ಈ ವೇಳೆ ಹಾವು ಮೊಟ್ಟೆ ಇಟ್ಟಿತ್ತು ಎನ್ನಲಾಗಿದೆ.
ಮೊಟ್ಟೆಗಳನ್ನು 3 ತಿಂಗಳ ಕಾಲ ಸಂರಕ್ಷಿಸಿ ಅವು ಮರಿಯಾಗಲು ಪೂರಕ ವಾತಾವರಣವನ್ನು ಕಲ್ಪಿಸಲಾಗಿತ್ತು. ನಂತರ ಮೊಟ್ಟೆಯೊಡೆದು 11 ಮರಿಗಳು ಹೊರ ಬಂದಿವೆ. ಸ್ವಲ್ಪ ದಿನ ಅವುಗಳನ್ನು ಆರೈಕೆ ಮಾಡಿ ಕಾಡಿಗೆ ಬಿಟ್ಟು ಬರಲಾಗಿದೆ ಎಂದು ನಾಗೇಂದ್ರ ತಿಳಿಸಿದರು.