ಹಾವಶೆಟ್ಟಿಗೆ ಶ್ರೇಷ್ಠ ಇಂಜಿನಿಯರ್ ಪ್ರಶಸ್ತಿ

Havshetty Patil Award
Published on

ಬೀದರ್: ಇಲ್ಲಿಯ ಹಿರಿಯ ಇಂಜಿನಿಯರ್ ಹಾವಶೆಟ್ಟಿ ಪಾಟೀಲ ಅವರಿಗೆ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಜಿನಿಯರ್ಸ್ (ಇಂಡಿಯಾ)ದ ಪ್ರಸಕ್ತ ಸಾಲಿನ ‘ಶ್ರೇಷ್ಠ ಇಂಜಿನಿಯರ್’ ಪ್ರಶಸ್ತಿ ದೊರೆತಿದೆ. ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಡಿ ಜಿಲ್ಲೆ ಬೀದರ್‍ಗೆ ಕಡಿಮೆ ವೆಚ್ಚದ ಗುಣಮಟ್ಟದ ಕಟ್ಟಡಗಳ ಹೊಸ ಹೊಸ ವಿನ್ಯಾಸಗಳನ್ನು ಪರಿಚಯಿಸಿದ ಹಿರಿಮೆ ಹಾವಶೆಟ್ಟಿ ಪಾಟೀಲ ಅವರದ್ದು. ಇಂಜಿನಿಯರ್‍ಗಳ ಸಂಘಟನೆ ಸೇರಿದಂತೆ ವಿವಿಧ ಸಾಮಾಜಿಕ ಸಂಘಟನೆಗಳಲ್ಲೂ ಅವರು ಸಕ್ರೀಯರಾಗಿದ್ದಾರೆ. ಸರಳ, ಸಜ್ಜನಿಕೆಗೆ ಹೆಸರಾದ ಅವರಿಗೆ ಅನೇಕ ಪ್ರಶಸ್ತಿ, ಸಮ್ಮಾನಗಳು ಸಂದಿವೆ.
ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ)ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ವಿಜಯ್ ಕೆ. ಸನಪ್ ಪ್ರಶಸ್ತಿ ಪ್ರದಾನ ಮಾಡಿದರು. ಅಸೋಸಿಯೇಷನ್ ಉಪಾಧ್ಯಕ್ಷರಾದ ಸಂದೀಪ್ ಶಿರಖೇಡಕರ್, ರಾಜಕುಮಾರ ಕಾಚರಲಾ, ಪ್ರಧಾನ ಕಾರ್ಯದರ್ಶಿ ವಿಜಯ ಮಯ್ಯಾ, ಖಜಾಂಚಿ ಆರ್. ಶ್ರೀನಿವಾಸನ್, ಬೀದರ್ ಶಾಖೆಯ ಚೇರ್‍ಮೆನ್ ಅನಿಲಕುಮಾರ ಔರಾದೆ, ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net