ಹಾಲುಮತ ಸಮಾಜದವರು ಪ್ರಾಮಾಣಿಕರು

12ATN1
ನಂದಗಾಂವ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭರಮದೇವರ ಸಮುದಾಯ ಭವನ ಅಡಿಗಲ್ಲು ಹಾಗೂ ಪ್ರವಚನ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿದರು. ಅಮರೇಶ್ವರ ಮಹಾರಾಜರು, ಮಹೇಶ ಕುಮಠಳ್ಳಿ, ಸದಾಶಿವ ಬುಟಾಳೆ, ಮಹಾದೇವ ಮಹಾರಾಜರು, ಪುಷ್ಪಕ ಪಾಟೀಲ ಇತರರಿದ್ದರು.
Published on

ಅಥಣಿ ಗ್ರಾಮೀಣ: ಪ್ರಾಮಾಣಿಕ ಭಕ್ತಿ ಹಾಗೂ ನಿಷ್ಠುರ ನಡೆಗೆ ಹಾಲುಮತ ಸಮುದಾಯದವರು ಪ್ರಸಿದ್ಧರಾಗಿದ್ದಾರೆ. ಸಂಗೊಳ್ಳಿ ರಾಯಣ್ಣನಂತಹ ದೇಶ ಭಕ್ತರ ನಾಡಿನಲ್ಲಿ ಜನಿಸಿರುವುದು ನಮ್ಮ ಪುಣ್ಯ ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10 ಲಕ್ಷ ರೂ. ವೆಚ್ಚದ ಭರಮದೇವರ ಸಮುದಾಯ ಭವನ ಅಡಿಗಲ್ಲು ಹಾಗೂ ಪ್ರವಚನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ತೆಲಸಂಗ ಗ್ರಾಮದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಮಾಜದವರೆ ಆದ ಸಚಿವ ಎಂ.ಟಿ.ಬಿ ನಾಗರಾಜ ಹಾಗೂ ಭೈರತಿ ಬಸವರಾಜ, ನಾನು ತಲಾ 25 ಲಕ್ಷ ರೂ. ನೀಡಲಿದ್ದೇನೆ. ಅಥಣಿಯಲ್ಲಿ ಕನಕ ಭವನ ನಿರ್ಮಾಣಕ್ಕೆ 1.20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ಮತ್ತು ಶಾಸಕ ಮಹೇಶ ಕುಮಠಳ್ಳಿ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದರು.

ಕೌಲಗುಡ್ಡದ ಅಮರೇಶ್ವರ ಮಹಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ನಿಜವಾದ ಧರ್ಮ. ಆಧ್ಯಾತ್ಮಿಕ ಚಿಂತನೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಮೌಲ್ಯಯುತ ಶಿಕ್ಷಣ ಪಡೆಯಬೇಕು, ಬುದ್ಧಿವಂತಿಕೆಗಿಂತ ಹೃದಯವಂತಿಕೆ ದೊಡ್ಡದಾಗಿದ್ದು, ಹೃದಯವಂತಿಕೆ ಬೆಳೆಸಿಕೊಂಡರೆ ಅದು ನಿಮ್ಮನ್ನು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ ಎಂದರು.

ಸುರೇಶ ಇಚೇರಿ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಬುಟಾಳೆ, ಮಹಾದೇವ ಮಹಾರಾಜರು, ಪುಷ್ಪಕ ಪಾಟೀಲ, ಸತ್ಯಪ್ಪ ಬಾಗೆಣ್ಣವರ, ಶಾಂತಿನಾಥ ನಂದೇಶ್ವರ, ಮುತ್ತಪ್ಪ ಕಾತ್ರಾಳ, ರಾವಸಾಬ ಬೇವನೂರ, ಮುತ್ತಪ್ಪ ಸಂತಿ, ನಿಂಗಪ್ಪ ಐನಾಪುರ, ನಿಂಗಪ್ಪ ನಂದೇಶ್ವರ, ರಾವಸಾಬ ಪಾಟೀಲ, ಬಾಬು ಮೆಂಡಿಗೇರಿ ಇತರರಿದ್ದರು.

ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಕೊಡದ ಶಿಕ್ಷಣ ವ್ಯರ್ಥ. ಸುಸಂಸ್ಕೃತಿಯ ಈ ನಾಡಿನ ಪರಂಪರೆಯಲ್ಲಿ ಗುರುಗಳು ಹಾಗೂ ಆಧ್ಯಾತ್ಮಿಕ ಚಿಂತಕರ ವಾಣಿಯನ್ನು ಕೇಳುವುದರಿಂದ ಮಾನವೀಯತೆಯ ಅರಿವು ಮೂಡುತ್ತದೆ.|ಮಹೇಶ ಕುಮಠಳ್ಳಿ, ಶಾಸಕಪ್ರಪಂಚದ ಅನೇಕ ರಾಷ್ಟ್ರದೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತಮ ಸಂಬಂಧ ಇಟ್ಟುಕೊಂಡಿರುವುದರಿಂದ ಅನೇಕ ರಾಷ್ಟ್ರಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ. ಇದು ಮೋದಿ ನಾಯಕತ್ವದ ತಾಕತ್ತು.| ಲಕ್ಷ್ಮಣ ಸವದಿ, ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net