ಹಾಲು ಶ್ವಾಸಕೋಶ ಸೇರಿದ್ದು ಮಗು ಸಾವಿಗೆ ಕಾರಣ

death jpg
Published on

ಕಾರ್ಕಳ: ಅನ್ನನಾಳಕ್ಕೆ ಸೇರಬೇಕಿದ್ದ ಹಾಲು ಶ್ವಾಸಕೋಶಕ್ಕೆ ಹೋದ ಪರಿಣಾಮ 10 ತಿಂಗಳ ಮಗು ಉಸಿರು ಕಟ್ಟಿ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ತಿಳಿಸಿದೆ.

ಮಿಯ್ಯರು ಗ್ರಾಮದ ಕಾಜರಬೈಲುವಿನಲ್ಲಿ ಜು.1ರಂದು ಮಗುವೊಂದು ಸಾವಿಗೀಡಾಗಿತ್ತು.ಮಗುವಿನ ಗಂಟಲದ್ರವ ಪರೀಕ್ಷೆ ನೆಗೆಟಿವ್ ಎಂಬುದು ದೃಢಪಟ್ಟಿದೆ. ಹಾಲುಕುಡಿಸುವ ಸಂದರ್ಭಅನ್ನನಾಳಕ್ಕೆ ಸೇರಬೇಕಾಗಿದ್ದ ಹಾಲು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಮಗು ಉಸಿರುಗಟ್ಟಿ ಮೃತಪಟ್ಟಿರಬೇಕೆಂದು ವೈದ್ಯರು ಪ್ರಥಮ ಹಂತದಲ್ಲಿಯೇ ಖಚಿತಪಡಿಸಿದ್ದರು. ಈಗ ಮಗುವಿನಲ್ಲಿ ಕರೊನಾ ಸೋಂಕು ಇರಲಿಲ್ಲ ಎಂಬುದು ಸ್ಪಷ್ಟವಾಗಿದ್ದು, ಈ ಬಗೆಗಿನ ಗೊಂದಲ ನಿವಾರಣೆಯಾಗಿದೆ.

ಮೂಲತಃ ಬಿಜಾಪುರ ಜಿಲ್ಲೆಯ ಮುದ್ದೆ ಕೇಶವಪುರದ ದಂಪತಿಯ ಹತ್ತು ತಿಂಗಳ ಮಗುವಿಗೆ ಜೂನ್ 28ರ ರಾತ್ರಿಜ್ವರ ಕಾಣಿಸಿಕೊಂಡು ಉಸಿರಾಟ ಸಮಸ್ಯೆಗೆ ಒಳಗಾಗಿತ್ತು. ಮರುದಿನ ಕಾರ್ಕಳ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net