

ತೂಬಗೆರೆ: ಗುಣಮಟ್ಟದ ಹಾಲು ಪೂರೈಸುತ್ತಿಲ್ಲ ಎಂದು ದೊಡ್ಡಬಳ್ಳಾಪುರ ಹಾಲು ಒಕ್ಕೂಟದ ಅಧಿಕಾರಿಗಳು ತೂಬಗೆರೆ ಡೇರಿಯಲ್ಲಿ ಹಾಲು ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ರಸ್ತೆಗೆ ಹಾಲು ಸುರಿದು ಪ್ರತಿಭಟಿಸಿದರು.
ತೂಬಗೆರೆ ಹಾಲು ಉತ್ಪಾದಕರ ಸಂಘಕ್ಕೆ ಗುರುವಾರ ಭೇಟಿ ನೀಡಿದ್ದ ದೊಡ್ಡಬಳ್ಳಾಪುರ ಹಾಲು ಒಕ್ಕೂಟದ ಅಧಿಕಾರಿಗಳು, ಹಾಲಿನ ಗುಣಮಟ್ಟ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕಳಪೆಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಖರೀದಿಸಲು ನಿರಾಕರಿಸಿದರು. ಅಲ್ಲದೆ, ಇನ್ನೂ ಎರಡ್ಮೂರು ದಿನ ಹಾಲು ಖರೀದಿಸುವುದಿಲ್ಲ ಎಂದು ಹೇಳಿದರು ಎನ್ನಲಾಗಿದೆ.
ಅಧಿಕಾರಿಗಳ ವರ್ತನೆಗೆ ಬೇಸರಿಸಿದ ರೈತರು, ಸರ್ಕಾರ ಪ್ರತಿದಿನವೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿದೆ. ಈಗ ಒಕ್ಕೂಟದ ಅಧಿಕಾರಿಗಳು ್ಯಾಟ್ ಬಂದಿಲ್ಲ ಎಂದು ಹಾಲು ಖರೀದಿಸಲು ನಿರಾಕರಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡಿರುವ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸಂಘದಲ್ಲಿ 165 ಸದಸ್ಯರು ಇದ್ದು, ಬೆಳಗ್ಗೆ ಮತ್ತು ಸಂಜೆ ಸೇರಿ ಒಟ್ಟು 2 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು ಎಂದು ಕಾರ್ಯದರ್ಶಿ ಮಾಹಿತಿ ನೀಡಿದರು.
ತೂಬಗೆರೆ ಹಾಲು ಉತ್ಪಾದಕರ ಸಂಘಕ್ಕೆ ಗುರುವಾರ ಭೇಟಿ ನೀಡಲಾಗಿತ್ತು. ಪರಿಶೀಲಿಸಿದಾಗ ಹಾಲು ಗುಣಮಟ್ಟ ಇಲ್ಲದ್ದು ಕಂಡುಬಂದಿತು. ಇದರಿಂದ ಹಾಲು ಖರೀದಿಸಲು ನಿರಾಕರಿಸಿದೆವು. ಇದರಿಂದ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಅನಿತಾ, ದೊಡ್ಡಬಳ್ಳಾಪುರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ