

ಬಾಗಲಕೋಟೆ: ವಿದೇಶದಲ್ಲಿ ಇದ್ದು ನಮ್ಮ ಸರ್ಕಾರ ಕೆಡವಲು ಪ್ರಯತ್ನಗಳು ನಡೆದಿವೆ ಎನ್ನುವ ಡಿಕೆಶಿ ಆರೋಪಕ್ಕೆ ಶುಕ್ರವಾರ ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.
ಹಾಲು ಕುಡಿದು ಸಾಯುವವರಿಗೆ ನಾವು ವಿಷ ಕೊಡುವ ಅವಶ್ಯಕತೆ ಇರಲ್ಲ. ಈಗ ಅವರು ಹಾಲು ಕುಡಿದು ಸಾಯುತ್ತಿದ್ದರೆ ಎಂದು ಛೇಡಿಸಿದರು.
ರಾಜ್ಯ ಸರ್ಕಾರದ ಮೇಲೆ ವಿಶ್ವಾಸ ಇಲ್ಲದೇ ಸಿಎಂ, ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ೩೦ ಜನ ಪ್ರಾಮಾಣಿಕ ಶಾಸಕರು ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ಕೊಟ್ಟಿದ್ದಾರೆ.
ಅದೇ ಕಾರಣಕ್ಕೆ ಮೊನ್ನೆ ಖರ್ಗೆ, ರಾಹುಲ್ ಗಾಂಧಿ ಅವರು ಸಭೆ ಕರೆದು ಬಂಡಾಯ ಎದ್ದಿರುವ ಶಾಸಕರನ್ನು ಸಮಾಧಾನ ಮಾಡಿದ್ದಾರೆ. ಶಾಸಕರು ಶಿಪಾರಸುಗಳಿಗೆ ಕಿಮ್ಮತ್ತು ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಸಂಪುಟದ ಎಲ್ಲ ಸದಸ್ಯರಿಗೆ ಛಿಮಾರಿ ಹಾಕಿದ್ದಾರೆ. ಇದು ಮುಂದುವರೆದರೆ ನಿಮಗೆ ಗೇಟ್ ಪಾಸ್ ಕೊಡುವುದಾಗಿ ಎಚ್ಚರಿಸಿದ್ದಾರೆ ಎಂದು ನಮಗೆ ಖಚಿತ ಮಾಹಿತಿ ಇದೆ ಎಂದರು.
ಯಾವ ಮೂಲೆಯಲ್ಲಿ ಇದ್ದಾನೇನ್ರಿ ಆ ಕೆಂಪಣ್ಣ…?ಇನ್ನು ನಮ್ಮ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿ ಕಮಿಷನ್ ಆರೋಪ ಮಾಡಿದ್ದ ಆ ಕೆಂಪಣ್ಣ ಎಲ್ಲಿದ್ದಾನರೀ ಯಾವ ಮೂಲೆಯಲ್ಲಿ ಇದ್ದಾನೆ. ಈ ಸರ್ಕಾರ ಬಂದ ಮೇಲೆ ಗುತ್ತಿಗೆದಾರರಿಗೆ ಒಂದು ಬಿಲ್ ಕೊಟ್ಟಿಲ್ಲ. ಗುತ್ತಿಗೆದಾರರ ಪರವಾಗಿ ಧ್ವನಿ ಎತ್ತುತ್ತಿಲ್ಲ. ನಮ್ಮ ಸರ್ಕಾರದ ವಿರುದ್ದ ಆಧಾರ ರಹಿತ ಆರೋಪ ಮಾಡಿ, ಈ ವರೆಗೂ ಒಂದನ್ನು ಸಾಭೀತು ಪಡಿಸಿಲ್ಲ ಅಂವಾ. ಈಗ ಏಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ಅವರ ಮನೆ ಮೂಲೆಯಲ್ಲಿ ಇದ್ದಾನೋ? ಡಿಕೆಶಿ ಮನೆ ಮೂಲೆಯಲ್ಲಿ ಇನ್ನೂ? ಬ್ಯಾಟರಿ ಹಾಕಿ ಹುಡಕಬೇಕಿದೆ. ನಮ್ಮ ಸರ್ಕಾರ ಇದ್ದಾಗ ಅವರ ಮನೆಯಲ್ಲಿ ಕುಳಿತು ಅರ್ಜಿ ಬರೆಯುತ್ತಿದ್ದ. ಈಗೆಲ್ಲಿ ಹೋಗಿದ್ದಾನೆ ಎಂದು ಕಿಡಿಕಾರಿದರು.
ಒಳಮೀಸಲಾತಿಯಿಂದ ಬಿಜೆಪಿ ಸೋತಿಲ್ಲ :
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಒಳಮೀಸಲಾತಿಯಿಂದಾಗಿ ತಾವು ಸೋಲಬೇಕಾಯಿತು ಎನ್ನುವವರದ್ದು ಭ್ರಮೆ ಎಂದು ಟಾಂಗ್ ನೀಡಿದ ಕಾರಜೋಳ, ಬಿಜೆಪಿ ಸೋಲಿಗೆ ನೂರೆಂಟು ಕಾರಣಗಳಿವೆ ಎಂದರು.
ನಮ್ಮ ಲೆಕ್ಕಾಚಾರಗಳು ಉಲ್ಟಾ ಆದವು. ೭೨ ಜನ ಹೊಸ ಮುಖಗಳಿಗೆ ಟಿಕೆಟï ಕೊಟ್ಟಿದ್ದನ್ನು ಜನರು ಸ್ವೀಕಾರ ಮಾಡಲಿಲ್ಲ. ಜೊತೆಗೆ ನಮ್ಮ ಮೇಲೆ ಕಾಂಗ್ರೆಸï ನವರು ಸುಳ್ಳು ಆರೋಪ ಮಾಡಿದಾಗ ನಾವು ಬರೀ ಉತ್ತರ ಕೊಟ್ಟೇವು. ಅದನ್ನು ಅಭಿಯಾನ ಮಾಡಲಿಲ್ಲ. ಹೀಗೆ ಹಲವಾರು ಕಾರಣದಿಂದ ಸೋತಿದ್ದೇವೆ ವಿನಃ ಒಳಮೀಸಲಾತಿ ವಿಚಾರವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಒಳ ಮೀಸಲಾತಿ ವಿಚಾರವಾಗಿ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಸಂಸತನಲ್ಲಿ ನೀಡಿರುವ ಹೇಳಿಕೆ ಬರೀ ಪ್ರಶ್ನೆಗೆ ಸಂಬಂಧಿಸಿದೆ. ನಮ್ಮ ಸರ್ಕಾರ ಸಂವಿಧಾನದ ಆರ್ಟಿಕಲ ೩೪೧ ತಿದ್ದುಪಡಿ ಮಾಡುವಂತೆ ರಾಜ್ಯಪಾಲರಿಂದ ಅನುಮೋದನೆ ಪಡೆದು ಕೇಂದ್ರಕ್ಕೆ ಶಿಪಾರಸು ಮಾಡಿದ್ದೇವೆ. ಒಳಮೀಸಲಾತಿಗೆ ನಮ್ಮ ಬಿಜೆಪಿ ಹಾಗೂ ಆರ್ ಎಸ್ ಎಸ್
ಬದ್ದವಾಗಿದೆ ಎಂದರು.