ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರ ಆಯ್ಕೆ

Published on

ಹನೂರು: ತಾಲೂಕಿನ ಚನ್ನಾಲಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಶುಕ್ರವಾರ ಗುರುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಕಳೆದ ಡಿ. 20 ರಂದು ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿಗದಿಪಡಿಸಿದ್ದ ಮೀಸಲು ಸ್ಥಾನಕ್ಕೆ ಅನುಗುಣವಾಗಿ ಸದಾಶಿವಮೂರ್ತಿ, ವೆಂಕಟೇಶ್, ಗುರುಸ್ವಾಮಿ, ನಟರಾಜು, ನಂಜುಂಡಸ್ವಾಮಿ, ಮಹದೇವಮ್ಮ, ಶಾಂತಮ್ಮ, ಶಿವಣ್ಣ, ಶಿವಲಂಕಾರಪ್ಪ ಹಾಗೂ ಅರಸಯ್ಯ ಆಯ್ಕೆಯಾಗಿದ್ದರು.

ಶುಕ್ರವಾರ ನಡೆದ ಚುನಾವಣೆಯಲ್ಲಿ ಗುರುಸ್ವಾಮಿ ಅವರನ್ನು ಮುಂದಿನ 5 ವರ್ಷದ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ರಿಟರ್ನಿಂಗ್ ಅಧಿಕಾರಿ ಎಸ್. ನಾಗೇಶ್ ಕಾರ್ಯನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಶಿವಕುಮಾರ್ ಇದ್ದರು. ಇದೇ ವೇಳೆ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net