ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

03Kush04
Published on

ಕುಶಾಲನಗರ: ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಕೆ.ಹೇಮಂತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ನರಸಮ್ಮ ಅವಿರೋಧವಾಗಿ ಆಯ್ಕೆಯಾದರು.
11 ಮಂದಿ ನಿರ್ದೇಶಕರನ್ನು ಒಳಗೊಂಡ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಕೆ.ಕೆ.ಹೇಮಂತ್ ಕುಮಾರ್ ಮತ್ತು ನರಸಮ್ಮ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಭಾಸ್ಕರ್ ಕಾರ್ಯನಿರ್ವಹಿಸಿದರು.
ನಿರ್ದೇಶಕರಾದ ಪುನೀತ್ ಕುಮಾರ್, ಗಿರೀಶ್, ಗೌತಮ್ ಕುಮಾರ್, ರವಿಕುಮಾರ್, ನಟೇಶ್ ಕುಮಾರ್, ಹರೀಶ್, ಜಯಮ್ಮ, ವಿಶ್ವೇಶ್ವರಯ್ಯ, ಅಣ್ಣಾಜಿ, ಗ್ರಾಮದ ಪ್ರಮುಖರಾದ ಕೆ.ವಿ.ಸಣ್ಣಪ್ಪ, ರಾಜೇಶ್, ಕೂಡ್ಲೂರು ಕುಮಾರ್, ಸುನಿಲ್ ರಾವ್, ಜವರೇಗೌಡ, ವೈ.ಟಿ.ಪರಮೇಶ್, ಮಂಜುನಾಥ, ಸುರೇಶ್, ರಾಮಚಂದ್ರ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net