ಹಾಲು ಉತ್ಪಾದಕರ ಸಹಕಾರ ಸಂಘ ಲಾಭ

hnp11
Published on

ಹೊಳೆನರಸೀಪುರ : ಕಡವಿನ ಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘ 2022 23ನೇ ಸಾಲಿನಲ್ಲಿ 1.63 ಲಕ್ಷ ಸಾವಿರ ನಿವ್ವಳ ಆದಾಯ ಗಳಿಸುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ವಿಸ್ತರಣಾಧಿಕಾರಿ ಪುರುಷೋತ್ತಮ್ ತಿಳಿಸಿದರು. ಸಂಘದ ಕಚೇರಿಯಲ್ಲಿ ಸೋಮವಾರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 25 ವರ್ಷಗಳಿಂದ ಈ ಸಹಕಾರ ಸಂಘ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಕಡವಿನ್ ಕೋಟೆಯ ಹಾಲು ಉತ್ಪಾದಕರ ಸಹಕಾರ ಸಂಘ ಸುಮಾರು 7 ಲಕ್ಷ ನಿವ್ವಳ  ಆದಾಯವನ್ನು ಹೊಂದಿದೆ. ಗ್ರಾಮದ ಜನರು ಹೆಚ್ಚು ಹಾಲು  ಉತ್ಪಾದನೆ ಮಾಡಬೇಕು. ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಬೇಕು ಇದರಿಂದ ಅಧಿಕ ಲಾಭವನ್ನು ಗಳಿಸಬಹುದು ಎಂದು ಹೇಳಿದರು. 2023-24ನೇ ಸಾಲಿನ ಲೆಕ್ಕ ಪರಿಶೋಧನೆಯ ಜಮಾ ಖರ್ಚು, ಆಸ್ತಿ, ಜವಾಬ್ದಾರಿ, ಲಾಭ,ನಷ್ಟ ವರದಿಯನ್ನ ಪರಿಶೀಲಿಸಿ ಚರ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net