ಹಾಲು ಉತ್ಪಾದಕರ ಸಂಘಕ್ಕೆ 27 ಲಕ್ಷ ರೂ. ಲಾಭ

IMG-20220923-WA0024
Published on

ಹಲಗೂರು: ಸಮೀಪದ ಯತ್ತಂಬಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಸತತ ಐದು ವರ್ಷಗಳಿಂದ ಲಾಭದಲ್ಲಿದೆ. ಪ್ರಸ್ತುತ ಸಾಲಿನಲ್ಲಿ 27 ಲಕ್ಷ ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ದಿನೇಶ್ ಹೇಳಿದರು.

ಸಂಘದ 21-22ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಕೇಂದ್ರದಿಂದ ಪ್ರತಿದಿನ ಮಂಡ್ಯ ಡೇರಿಗೆ 6 ಸಾವಿರ ಲೀಟರ್ ಹಾಲನ್ನು ಕಳಿಸುತ್ತಿದ್ದೇವೆ. ತಾಲೂಕಿನಲ್ಲಿ ನಮ್ಮದು ನಂ.1 ಹಾಲು ಉತ್ಪಾದನಾ ಕೇಂದ್ರವಾಗಿದೆ ಎಂದರು. ಇದೇ ಸಂದರ್ಭ ಹೆಚ್ಚು ಹಾಲು ಸರಬರಾಜು ಮಾಡಿದ ಗ್ರಾಮದ ಕೃಷಿಕರಾದ ಧರ್ಮ, ಪುಟ್ಟಸ್ವಾಮಿ ಮತ್ತು ಜ್ಯೋತಿ ಎಂಬುವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ರಘು, ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net