ಹಾಲಸಿದ್ದನಾಥ ಕಾರ್ಖಾನೆಗೆ ಬಹುರಾಜ್ಯ ಕಾಯ್ದೆಯಡಿ ಅನುಮತಿ - ಸಂಸದ ಅಣ್ಣಾಸಾಹೇಬ ಜೊಲ್ಲೆ

1ck1final
Published on

ಚಿಕ್ಕೋಡಿ: ನಿಪ್ಪಾಣಿ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭಾರತ ಸರ್ಕಾರ ಬಹುರಾಜ್ಯ ಕಾಯ್ದೆಯಡಿ ಅನುಮತಿ ಲಭಿಸಿದೆ ಎಂದು ಕಾರ್ಖಾನೆಯ ರೂವಾರಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಅವರು ಶನಿವಾರ ಕಾರ್ಖಾನೆಯ ಸಭಾಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಇತಿಹಾಸದಲ್ಲಿಯೇ ಐತಿಹಾಸಿಕ ದಿನ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಯು ರೈತ ಸದಸ್ಯರ ಹಿತದೃಷ್ಠಿಯಿಂದ ಕೇವಲ ಪ್ರತಿದಿನ ೨.೫ ಮೆ.ಟನ್ ಕಬ್ಬು ನುರಿಸುವ ಸಾಮರ್ಥ್ಯದಿಂದ ಇಂದು ಪ್ರತಿದಿನ ೮೫೦೦ ಮೆ.ಟನ್.ಕಬ್ಬು ನುರಿಸುವ ಸಾಮರ್ಥ್ಯ ಬರುವ ಹಂಗಾಮಿನಲ್ಲಿ ಪ್ರಾರಂಭವಾಗಲಿದೆ.ಇದರ ಜೊತೆಗೆ ಇಥನಾಲ್ ಘಟಕ, ಕೋ ಜನ್ ಹೀಗೆ ಕಾರ್ಖಾನೆಯನ್ನು ವಿಸ್ತರಿಸಿ ರೈತ ಸದಸ್ಯರು ಕಾರ್ಖಾನೆಗೆ ಕಳುಹಿಸಿದ ಕಬ್ಬು ನುರಿಸಲಾಗದೇ ಅವರಿಗೆ ನ್ಯಾಯ ಒದಗಿಸಿಕೊಡಲು ಆಗಿರಲಿಲ್ಲ ಇದೀಗ ಕಾರ್ಖಾನೆಯು ಬಹುರಾಜ್ಯ ಕಾಯ್ದೆ(ಮಲ್ಟಿಸ್ಟೇಟ್)ಯಡಿ ಅನುಮತಿ ದೊರೆತಿರುವುದರಿಂದ ಹಾಗೂ ಕಾರ್ಖಾನೆಗೆ ಆಧುನಿಕ ಸ್ಪರ್ಶ ನೀಡಿ ವಿಸ್ತರಣೆ ಮಾಡಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ನ್ಯಾಯ ದೊರಕಿಸಿಕೊಡಲು ಅನುಕೂಲವಾಗಿದೆ ಎಂದರು.

ಬಹುರಾಜ್ಯ ಕಾಯ್ದೆಯಡಿ ಕಾರ್ಖಾನೆಯ ವ್ಯಾಪ್ತಿಯು ನಿಪ್ಪಾಣಿ,ಚಿಕ್ಕೋಡಿ ತಾಲೂಕು ಒಳಗೊಂಡು ಕೊಲ್ಲಾಪೂರ ಜಿಲ್ಲೆಯ ಕಾಗಲ ತಾಲೂಕಿನ ಅರ್ಜುನಗಿ,ಲಿಂಗನೂರ,ಚಿಕ್ಕಲಿ,ಗೊರAಬೆ,ಶೆAಡೂರ,ಶAಕರವಾಡಿ,ವAದೂರ ಹಾಗೂ ಕರನೂರ ಸೇರಿದಂತೆ ೮ ಹಳ್ಳಿಗಳು ಹಾಗೂ ಗಡಹಿಂಗ್ಲಜ ತಾಲೂಕಿನ ಮುತ್ನಾಳ,ನಿಲಜಗಿ,ಹೆಬ್ಬಾಳ,ದುಂಡಗಿ,ಅವರನಾಳ,ಗಡಹಿAಗ್ಲಜ್‌ನ ರೈತ ಸದಸ್ಯರ ಕಬ್ಬು ನುರಿಸಲು ಅನುಕೂಲವಾಗಲಿದೆ ಎಂದರು.

ಕಾರ್ಖಾನೆಯ ಅಧ್ಯಕ್ಷ ಚಂದ್ರಕಾAತ ಕೋಟಿವಾಲೆ ಮಾತನಾಡಿ, ಬಹುರಾಜ್ಯ ಕಾಯ್ದೆಯಡಿ ನೋಂದಾವಣೆಯಾಗಲು ಸುಮಾರು ಸುಮಾರು ಎರಡು ವರ್ಷಗಳ ಅವಧಿ ಬೇಕಾಗುತ್ತದೆ.ಆದರೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕೇಂದ್ರದಲ್ಲಿ ಸಂಸದರಾಗಿ ಕೆಲಸ ಮಾಡುತ್ತಿರುವುದರಿಂದ ಕೇವಲ ನಾಲ್ಕೆ ತಿಂಗಳಿನಲ್ಲಿ ಕಾರ್ಖಾನೆಗೆ ಬಹುರಾಜ್ಯ ಕಾಯ್ದೆಯಡಿ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದರು.

ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಿ,ಕಳೆದ ೪ ವರ್ಷಗಳ ಹಿಂದೆ ಹೇಗಿದ್ದ ಕಾರ್ಖಾನೆ ಈಗ ಹೇಗಾಗಿದೆ. ಇದ್ದ ಜಾಗೆಯಲ್ಲಿ ಅತೀ ಕಡಿಮೆ ಖರ್ಚಿನಲ್ಲಿ ಕಾರ್ಖಾನೆಯನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಉದ್ದೇಶ ಪೂರ್ಣತ್ವಕಡೆಗೆ ಹೋಗುತ್ತಿರುವುದು ಸಂತಸದ ಸುದ್ದಿ ಬರುವ ದಿನಗಳಲ್ಲಿ ಕಾರ್ಖಾನೆಯನ್ನು ನಂ-೧ ಮಾಡಲು ಪ್ರಯತ್ನಸೋಣ ಎಂದು ತಿಳಿಸಿದ ಅವರು ಜೊಲ್ಲೆ ಪರಿವಾರ ಕಾರ್ಖಾನೆಯ ಅಭಿವೃದ್ಧಿಗೆ ಕಟ್ಟಿಬದ್ದವಾಗಿದೆ ಎಂದರು.

ವ್ಯವಸ್ಥಾಪಕ ನಿರ್ದೇಶಕ ಶಿವಾ ಕುಲಕರ್ಣಿ ಮಾತನಾಡಿ, ಪರಿವರ್ತನೆಯ ಸಂದರ್ಭದಲ್ಲಿ ಸಂಸದರಾದ ಅಣಾಸಾಹೇಬ ಜೊಲ್ಲೆ ಅವರು ವಿಶೇಷ ಮುತುವರ್ಜಿವಹಿಸಿ ಭಾರತ ಸರ್ಕಾರದಿಂದ ಮಲ್ಟಿಸ್ಟೇಟ್ ಅನುಮತಿ ಪಡೆದಿರುವುದನ್ನು ನೋಡಿದರೇ ಒಬ್ಬ ಒಳ್ಳೆಯ ವ್ಯಕ್ತಿಯಲ್ಲಿ ಒಳ್ಳೆಯ ಮನಸ್ಸು,ವಿಚಾರ ಇದ್ದರೆ ಹಿಡಿದ ಕೆಲಸಕ್ಕೆ ಯಶಸ್ಸು ಸಿಗಲಿದೆ ಎಂದು ತಿಳಿಸಿ ಕಾರ್ಖಾನೆಯ ಎಲ್ಲ ಸಿಬ್ಬಂದಿಗಳ ಪರವಾಗಿ ಅಭಿನಂದನೆ ಸಲ್ಲಿಸಿ ನಾವೆಲ್ಲರು ಜವಾಬ್ದಾರಿಯನ್ನು ನಿರ್ವಹಸಿ ರೈತರಿಗೆ ಅನುಕೂಲ ಕಲ್ಪಿಸುತ್ತೇವೆ ಎಂದರು.

ಜ್ಯೋತಿಪ್ರಸಾದ ಜೊಲ್ಲೆ,ಅಪ್ಪಾಸಾಹೇಬ ಜೊಲ್ಲೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಪಪ್ಪು ಪಾಟೀಲ ಸ್ವಾಗತಿಸಿದರು. ಎಂ.ಪಿ.ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net