

ಮೈಸೂರು: ಹಾರ್ಡ್ವಿಕ್ ಶಾಲೆಗೆ ದಸರಾ ದೀಪಾಲಂಕಾರ ಮಾಡಬೇಕು ಎಂದು ಶಾಲೆಯ ಹಳೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಒಂದೂವರೆ ಶತಮಾನ ಕಂಡಿರುವ ನಗರದ ಹಲವು ಪಾರಂಪರಿಕ ಕಟ್ಟಡಗಳಲ್ಲಿ ಜೆಎಲ್‌ಬಿ ರಸ್ತೆಯಲ್ಲಿರುವ ಸುಪ್ರಸಿದ್ಧ ಹಾರ್ಡ್ವಿಕ್ ಪ್ರೌಢಶಾಲೆಯೂ ಒಂದು. ಚೌಕಾಕಾರ ಆವರಣದ ಈ ಕಟ್ಟಡ ನಿರಾಭರಣ ಸುಂದರ ಪಾರಂಪರಿಕ ಪ್ರತೀಕ. ಮದ್ರಾಸ್ ತಾರಸಿಯ ಮೂರು ಅಂತಸ್ತುಗಳ ಈ ಕಟ್ಟಡಕ್ಕೆ ಕಮಾನಿನ ದ್ವಾರ ಸ್ವಾಗತಿಸುತ್ತದೆ. ಈ ಬಾರಿಯ ದಸರಾ ದೀಪಾಲಂಕಾರದಲ್ಲಿ ಈ ಶಾಲೆಗೂ ಬೆಳಕಿನ ಅಲಂಕಾರದ ವ್ಯವಸ್ಥೆ ಮಾಡುವುದರ ಮೂಲಕ ಶಾಲೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಕೋರಿಕೆಯಾಗಿದೆ ಎಂದು ಅಹಲ್ಯ ಸಿ.ನಾ.ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.