ಹಾರಿ ಹೋದ ಶಾಲೆ-ಮನೆಗಳ ಶೀಟ್‌ಗಳು

Rain
Published on

ಚಿತ್ರದುರ್ಗ: ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಸಿನ ಮಳೆ-ಗಾಳಿಗೆ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಬಾಪೂಜಿ ಸಮನ್ವಯ ಪ್ರೌಢಶಾಲೆ ಕಟ್ಟಡದ ಮೇಲಿನ ಶೀಟ್‌ಗಳು ಕಬ್ಬಿಣದ ಹ್ಯಾಂಗ್ಲರ್‌ಗಳ ಸಮೇತ ಹಾರಿ ಬಿದ್ದ ಪರಿಣಾಮ ಏಳೆಂಟು ಮನೆಗಳ ಶೀಟ್‌ಗಳಿಗೂ ಹಾನಿ ಉಂಟಾಗಿದೆ.

ಇಲ್ಲಿನ ಎ.ಕೆ.ಕಾಲನಿಯ ನಿತಿನ್, ಕೃಷ್ಣಮ್ಮ ಎಂಬುವವರ ತಲೆಗೂ ಪೆಟ್ಟಾಗಿ ಗಾಯಗಳಾಗಿವೆ. ರಾತ್ರಿ ಮಲಗಿದ್ದವರು ಶೀಟ್‌ಗಳು ಬಿದ್ದ ಶಬ್ಧಕ್ಕೆ ಹೆದರಿ, ಹೊರಗೆ ಓಡಿ ಬಂದಿದ್ದರಿಂದ ಅದೃಷ್ಟವಶಾತ್ ಜೀವ ಹಾನಿಯಾಗಿಲ್ಲ. ತಹಸೀಲ್ದಾರ್ ಡಾ.ನಾಗವೇಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರ್ಯಾಯ ವ್ಯವಸ್ಥೆಗೂ ಸೂಚಿಸಿದರು. ಪೊಲೀಸ್ ಅಧಿಕಾರಿಗಳು ಇದ್ದರು.

ಬಿದ್ದ ವಿದ್ಯುತ್ ಕಂಬಗಳು: ಗಾಳಿ ಸಹಿತ ಸುರಿದ ಭಾರಿ ಮಳೆಗೆ ಹತ್ತಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ನಗರದ ಕೆಲ ಬಡಾವಣೆ ಸೇರಿ ಗ್ರಾಮೀಣ ಭಾಗಗಳಲ್ಲೂ ಬೆಳಕಿಲ್ಲದೆ ನಿವಾಸಿಗಳು ಪರದಾಡುವಂತಾಯಿತು. ಹೊಳಲ್ಕೆರೆ ವ್ಯಾಪ್ತಿಯಲ್ಲಿ ಎರಡು ಪರಿವರ್ತಕಕ್ಕೆ ಹಾನಿ ಉಂಟಾಗಿದೆ. ಮಾಹಿತಿ ಆಧರಿಸಿ ಬಿದ್ದಿರುವ ಕಂಬಗಳನ್ನು ಬೆಸ್ಕಾಂ ಸಿಬ್ಬಂದಿ ರಾತ್ರಿಯಿಡೀ ಕಾರ್ಯಚರಣೆ ನಡೆಸಿ, ತೆರವು ಮಾಡಲು ಮುಂದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net