

ಸುಂಟಿಕೊಪ್ಪ: ಗರಗಂದೂರಿನ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯಲೆಂದು ತೆರಳಿದ ಯುವಕ ಮಂಗಳವಾರ ನೀರು ಪಾಲಾಗಿದ್ದಾರೆ.
ಸೋಮವಾರಪೇಟೆ ಬಳಿಯ ನಗರೂರು ಗ್ರಾಮದ ನಿವಾಸಿ ಯೋಗೇಶ್(25) ಮೃತ ಯುವಕ. ಗರಗಂದೂರಿನಲ್ಲಿ ತೋಟದ ಕೆಲಸ ಮಾಡುತ್ತಿದ್ದ ಯೋಗೇಶ್ ಮಂಗಳವಾರ ರಜೆ ಇದ್ದ ಕಾರಣ ಸ್ನೇಹಿತ ಪ್ರದೀಪ್‌ರೊಂದಿಗೆ ಗರಗಂದೂರಿನ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.