

ಹೊಳೆಆಲೂರ: ಸಮಾಜದಲ್ಲಿನ ಸಂಸ್ಕಾರದ ಕೊರತೆ ಪರಿಣಾಮ ಭ್ರಷ್ಟಾಚಾರ ಹೊತ್ತು ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಗೌರವಿಸುವ ಮನಸ್ಥಿತಿ ಯುವಕರಲ್ಲಿ ಕಂಡು ಬರುತ್ತಿರುವುದು ಸರಿಯಲ್ಲ. ತಳಮಟ್ಟದಿಂದ ಮೇಲಿನವರೆಗೆ ವ್ಯವಸ್ಥೆ ಬದಲಾವಣೆಯಾಗದ ಹೊರತು ಸಮಾಜ, ದೇಶದಲ್ಲಿ ಬದಲಾವಣೆ ಕನಸಿನ ಮಾತು ಎಂದು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಅಭಿಪ್ರಾಯ ವ್ಯಕ್ತ ಪಡಿಸಿದರು.
ಗ್ರಾಮದ ಜ್ಯೋತಿ ಶಿಕ್ಷಣ ಸಮಿತಿಯಿಂದ ಸದ್ವಿದ್ಯಾ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ, ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಉಪನ್ಯಾಸಕಿ ಗುರುದೇವಿ ಮಹಾಕಾಶಿಮಠ ಮಾತನಾಡಿ, ಭಾರತೀಯ ಇತಿಹಾಸ ಪರಂಪರೆಯಲ್ಲಿ ಮಹಿಳೆಯ ಸ್ಥಾನಮಾನಕ್ಕೆ ಎಂದೂ ಧಕ್ಕೆಯಾಗಿಲ್ಲ. ಪಾಶ್ಚಿಮಾತ್ಯರು ಸ್ತ್ರೀಯನ್ನು ವಸ್ತುವಿನ ರೂಪದಲ್ಲಿ ನೋಡಿದರೆ, ನಮ್ಮ ದೇಶದಲ್ಲಿ ಸ್ತ್ರೀಯನ್ನು ಪೂಜ್ಯಭಾವದಿಂದ ಕಾಣುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಚ್ಚರೇಶ್ವರ ಮಠದ ವಿಜಯಲಕ್ಷ್ಮೀ ಯಚ್ಚರಸ್ವಾಮಿಮಠ ಸಾನ್ನಿಧ್ಯ ವಹಿಸಿದ್ದರು. ಕಮಲವ್ವ ಮೆಣಸಗಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷೆ ಪ್ರೇಮಾ ನಾಯಕ, ಉಪನ್ಯಾಸಕಿ ರೇಖಾ ನೀರಲಗಿ, ಗ್ರಾಪಂ ಉಪಾಧ್ಯಕ್ಷೆ ಸರೋಜಮ್ಮ ಗೌರಿಮಠ, ಬಿಇಒ ಕಾರ್ಯಾಲಯದ ಪಿ.ಆರ್. ಹಿರೇಮಠ, ಜ್ಯೋತಿ ಪಿ.ಎಂ. ಇತರರಿದ್ದರು.
EndFragment