ಹಾನಿಯಾದ ಮನೆಗಳಿಗೆ ಪರಿಹಾರ ಒದಗಿಸಿ

nrp home
ಕಾನೂರು ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಯಾದ ಮನೆಗಳನ್ನು ದಲಿತ ಮುಖಂಡರು ವೀಕ್ಷಿಸಿದರು. ರಾಮು, ಪವಿತ್ರಾ, ಲಾರೆನ್ಸ್, ಸುಜಿತ್, ಚಂದ್ರಶೇಖರ್, ಮಹೇಶ್ ಇತರರಿದ್ದರು.
Published on

ಎನ್.ಆರ್.ಪುರ: ಪ್ರಸಕ್ತ ವರ್ಷ ಮಳೆ, ಗಾಳಿಯಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾವಣ, ಕಾನೂರು, ರಾಮನಹಡ್ಲು, ವಾಟೆಮರ, ಮಡೋಡಿ, ಮೂಲೆಮನೆ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ 7 ಮನೆಗಳಿಗೆ ಹಾನಿಯಾಗಿದ್ದು, ದಲಿತ ಸಂಘರ್ಷ ಸಮಿತಿಯಿಂದ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಿ.ರಾಮು ತಿಳಿಸಿದ್ದಾರೆ.

ಅತಿಯಾದ ಮಳೆಯಿಂದಾಗಿ ದಲಿತರ ಮೂರು ಮನೆಗಳು ಸಂಪೂರ್ಣ ಕುಸಿದಿವೆ. 4 ಮನೆಗಳ ಛಾವಣಿ ಮತ್ತು ಗೋಡೆಗಳು ಕುಸಿದಿವೆ. ಗ್ರಾಮ ಪಂಚಾಯಿತಿಗೆ ಈ ಮನೆಗಳ ಕಂದಾಯ ಕಟ್ಟುತ್ತಿದ್ದೇವೆ. ಆದರೆ ಹಕ್ಕುಪತ್ರ ನೀಡಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ತಕ್ಷಣ ಪರಿಹಾರ ನೀಡಬೇಕು. ಹಾನಿಯಾಗಿರುವ ಮನೆ ಬಗ್ಗೆ ಸಂತ್ರಸ್ತರು ದಲಿತ ಸಂಘರ್ಷ ಸಮಿತಿಯ ಕೃಷ್ಣಪ್ಪ ಬಣದ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಪರಿಶೀಲನೆ ಮಾಡಿ ಪರಿಹಾರ ನೀಡದಿದ್ದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿ ಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.

ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು, ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಪವಿತ್ರಾ ದೇವರಾಜ್, ಮೆಣಸೂರು ಗ್ರಾಮ ಸಂಚಾಲಕ ಲಾರೆನ್ಸ್, ಕಾನೂರು ಗ್ರಾಮ ಸಂಚಾಲಕ ಸುಜಿತ್, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net