ಹಾನಿಗೊಂಡ ಮನೆಗಳಿಗೆ ಶೀಘ್ರ ಪರಿಹಾರ

MDG natyana
ಮೂಡಿಗೆರೆ ತಾಲೂಕು ಮೈಲಿಮನೆ ಗ್ರಾಮದಲ್ಲಿ ಮಳೆಯಿಂದ ಹಾನಿಗೊಂಡ ಮನೆಗಳನ್ನು ಶಾಸಕಿ ನಯನಾ ಮೋಟಮ್ಮ ವೀಕ್ಷಿಸಿದರು. ತಹಸೀಲ್ದಾರ್ ರಾಜಶೇಖರ್‌ಮೂರ್ತಿ, ದಯಾವತಿ ಹಾಗೂ ಸ್ಥಳೀಯ ಮುಖಂಡರು ಇದ್ದರು.
Published on

ಮೂಡಿಗೆರೆ: ತಾಲೂಕಿನಲ್ಲಿ ಈ ಬಾರಿ ಪೂರ್ವ ಮುಂಗಾರು ಭಾರಿ ಮಳೆಯಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಸಿದ ಮನೆಗಳಿಗೆ ಶಾಸಕಿ ನಯನಾ ಮೋಟಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಮನೆ ಕುಸಿತಕ್ಕೊಳಗಾದ ವಸ್ತಾರೆ ಹೋಬಳಿ ವ್ಯಾಪ್ತಿಯ ಮೈಲಿಮನೆ ಗ್ರಾಮದ ಕವಿತಾ ರವಿ, ಬಿದರಹಳ್ಳಿ ಗ್ರಾಪಂನ ಹನುಮನಹಳ್ಳಿ ಸುಶೀಲಾ ರವಿ, ಬಣಕಲ್ ಹೋಬಳಿ ತ್ರಿಪುರ ಗ್ರಾಮದ ಸುಶೀಲಾ ಗೋಪಾಲ, ಕುಸುಮಾ ಪದ್ಮಾ ಪೂಜಾರಿ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಕಡೆ ಹಾನಿಯಾದ ಮನೆಗಳನ್ನು ವೀಕ್ಷಿಸಿದರು. ಸಂತ್ರಸ್ತ ಕುಟುಂಬಸ್ಥರಿಗೆ ನಯನಾ ಮೋಟಮ್ಮ ಧೈರ್ಯ ತುಂಬಿದರು. ಸೂಕ್ತ ಪರಿಹಾರ ಶೀಘ್ರವಾಗಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ರಾಜಶೇಖರ್‌ಮೂರ್ತಿ, ತಾಪಂ ಇಒ ದಯಾವತಿ ಹಾಗೂ ಸ್ಥಳೀಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net