ಹಾನಿ ಪ್ರದೇಶವನ್ನು ಪರಿಶೀಲಿಸಿದ ಕಂದಾಯ ಅಧಿಕಾರಿಗಳು

IMG-20230522-WA0002
ಗಾಳಿ ಸಹಿತ ಮಳೆಗೆ ಹಾನಿಗೀಡಾಗಿದ್ದ ಧರ್ಮಾಪುರದ ಗ್ರಾಪಂ ಹೊನ್ನಿಗುಪ್ಪೆ ಗ್ರಾಮದ ರಾಮಭೋವಿ ಅವರ ಮನೆಗೆ ಮಂಗಳವಾರ ಕಂದಾಯ ಅಧಿಕಾರಿಗಳು ಭೇಟಿ ಮಾಹಿತಿ ಮಾಹಿತಿ ಪಡೆದರು. ನಂದೀಶ್, ಶಿವಕುಮಾರ್, ವೀರಭದ್ರಸ್ವಾಮಿ ಇತರರು ಇದ್ದರು.
Published on

ಧರ್ಮಾಪುರ: ಧರ್ಮಾಪುರದ ಸುತ್ತಮುತ್ತ ಮಳೆಹಾನಿ ಪ್ರದೇಶಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯಿತಿಯ ಹೊನ್ನಿಗುಪ್ಪೆ ಗ್ರಾಮದ ರಾಮಭೋವಿ ಅವರ ಮನೆಯ ಸೀಟು ಗಾಳಿ ಸಹಿತ ಮಳೆಗೆ ಹಾರಿ ಹೋಗಿದ್ದು, ಮನೆಯ ಬೀರು ಸೇರಿದಂತೆ ದವಸ-ಧಾನ್ಯಗಳು ಹಾನಿಗೀಡಾಗಿತ್ತು. ಮನೆಗೆ ಭೇಟಿ ನೀಡಿದ ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ತರಿಂದ ಮಾಹಿತಿ ಪಡೆದರು. ಪರಿಹಾರ ಕೊಡಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಸಬಾ ಹೋಬಳಿ ನಿರೀಕ್ಷಕ ನಂದೀಶ್ ತಿಳಿಸಿದರು. ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net