ಹಾದಿಹಳ್ಳಿ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯಕ್ಕೆ ಒತ್ತಾಯ

16 ckm 4
ಚಿಕ್ಕಮಗಳೂರು ಕೆಎಸ್‌ಆರ್ಟಿಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದ ಡಿಎಸ್ಎಸ್ ಮುಖಂಡರು ಹಾದಿಹಳ್ಳಿ ಮಾರ್ಗದಲ್ಲಿ ಹಿಂದಿನ ಸಮಯದಲ್ಲೇ ಸರ್ಕಾರಿ ಬಸ್‌ಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ದಂಟರಮಕ್ಕಿ ಶ್ರೀನಿವಾಸ್, ಚಂದ್ರಶೇಖರ ಪುರ, ಹಾದಿಹಳ್ಳಿ ಅಶೋಕ್, ಭಾಸ್ಕರ್, ಗಣೇಶ್‌ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಹಾದಿಹಳ್ಳಿ ಮಾರ್ಗದಲ್ಲಿ ಹಿಂದಿನ ಸಮಯದಲ್ಲೇ ಸರ್ಕಾರಿ ಬಸ್‌ಗಳು ಸಂಚರಿಸಲು ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಡಿಎಸ್ಎಸ್ ಮುಖಂಡರು ಬುಧವಾರ ಕೆಎಸ್‌ಆರ್ಟಿಸಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ಈ ಹಿಂದೆ ಅಂಬಳೆ ಮಾರ್ಗವಾಗಿ ಹಿರೇಮಗಳೂರು, ಅಂಬಳೆ, ಸಿರಗಾಪುರ, ಬಿಗ್ಗದೇವನಹಳ್ಳಿ, ಹಾದಿಹಳ್ಳಿ, ಹಲ್ಮಿಡಿ, ಹೊಸಮನೆಹಳ್ಳಿ, ನಾರಾಯಣಪುರ ಮತ್ತು ಬೆಣ್ಣೂರಿಗೆ ಬಸ್ ಸಂಚರಿಸುತ್ತಿತ್ತು ಎಂದರು.

ಹಾದಿಹಳ್ಳಿ ಮಾರ್ಗವಾಗಿ ದಿನದ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸಮಯದಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು. ಇದೀಗ ಕೇವಲ ಒಂದು ಬಸ್ ಸೌಲಭ್ಯ ಮಾತ್ರ ಹಾದಿಹಳ್ಳಿಯಿಂದ ಇದೆ. ಉಳಿದ ಸಮಯದಲ್ಲಿ ಬಸ್‌ಗಳಿಲ್ಲದೇ ಶಾಲಾವಿದ್ಯಾರ್ಥಿಗಳು, ವಯೋವೃದ್ದರು ಸಂಜೆ ವಾಪಸ್ ಊರಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದರು.

ಸಂಜೆ ವೇಳೆ ಸರಿಯಾದ ಸಮಯಕ್ಕೆ ಬಸ್ ಬಾರದಿರುವ ಕಾರಣ ಮಹಿಳೆಯರು, ಬಾಲಕಿಯರು ಆತಂಕದಿಂದ ನಡೆದುಕೊಂಡೇ ಸಾಗಬೇಕಾಗಿದೆ. ಹೀಗಾಗಿ ಮೊದಲು ಹಾದಿಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳ ಸಮಯವನ್ನೇ ಮುಂದುವರಿಸಿ ಗ್ರಾಮಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಹಾದಿಹಳ್ಳಿ ಗ್ರಾಮದ ಬಸ್ ನಿಲ್ದಾಣವು ತೀವ್ರ ಹಳೆಯದಾದ ಕಾರಣ ಹೊಸದಾಗಿ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ವಿಳಂಭ ಧೋರಣೆ ಅನುಸರಿಸಿದರೆ ಕೆಎಸ್ಆರ್ಟಿಸಿ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಡಿಎಸ್ಎಸ್‌ ಜಿಲ್ಲಾ ಸಂಚಾಲಕ ಚಂದ್ರಶೇಖರ್‌ ಪುರ, ಮುಖಂಡರಾದ ಹಾದಿಹಳ್ಳಿ ಅಶೋಕ್, ಭಾಸ್ಕರ್, ಗಣೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net