ಹಾಡುಹಗಲೇ 12 ಲಕ್ಷ ರೂ. ಚಿನ್ನಭರಣ ಕಳ್ಳತನ

0101
Published on

ಬೈಲಹೊಂಗಲ: ಪಟ್ಟಣದ ಪೊಲೀಸ್​ ಠಾಣೆ ಪಕ್ಕದಲ್ಲಿರುವ ಮನೆಗಳ ಬೀಗ ಮುರಿದು ಲಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಸವದತ್ತಿ ಉಪನೋಂದಣಿ ಅಧಿಕಾರಿ ಅಣ್ಣಪ್ಪ ಶಿಂತ್ರಿ, ಸುರೇಶ ಮೂಗಬಸವ ಎಂಬುವರ ಮನೆಗಳಲ್ಲಿ ಕಳ್ಳತನವಾಗಿದೆ. ಅಣ್ಣಪ್ಪ ಹಾಗೂ ಸುರೇಶ ಇಬ್ಬರು ಪಟ್ಟಣದಲ್ಲಿರದ ಸಮಯದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. 2ಲಕ್ಷ ರೂ. ನಗದು ಹಾಗೂ 20 ತೊಲೆ ಚಿನ್ನಾಭರಣ ಸೇರಿ ಅಂದಾಜು 12 ಲಕ್ಷ ರೂ. ನಗನಾಣ್ಯ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net