

ಸಿದ್ದಾಪುರ: ದಿಡ್ಡಳ್ಳಿ ಆಶ್ರಮ ಶಾಲೆ, ವಿರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ಇಲ್ಲಿನ ದಿಡ್ಡಳ್ಳಿ ಚೆನ್ನಂಗಿ ಬಸವನಹಳ್ಳಿಯ ಗಿರಿಜನ ಆಶ್ರಮ ಶಾಲೆಯಲ್ಲಿ ಬುಧವಾರ ಶೂ ವಿತರಣೆ ಮಾಡಲಾಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟು ಮಾದಂಡ ತಿಮ್ಮಯ್ಯ ಮಾತನಾಡಿ, ಗಿರಿಜನ ಆಶ್ರಮಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಉನ್ನತ ಸ್ಥಾನಮಾನ ಅಲಂಕರಿಸಬೇಕೆಂದು ಕಿವಿಮಾತು ಹೇಳಿದರು.
ತಾಲೂಕು ಐಟಿಡಿಪಿ ಅಧಿಕಾರಿ ಡಿ.ಜಿ.ಗುರುಶಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ಧಾಪುರ ಪ್ರೌಢಶಾಲಾ ದೈಹಿಕ ಶಿಕ್ಷಕ ಕೆ.ಜಿ.ಅಶೋಕ್, ದಿಡ್ಡಳ್ಳಿ ಗಿರಿಜನ ಆಶ್ರಮ ಶಾಲೆಯ ಮುಖ್ಯಶಿಕ್ಷಕ ಎನ್.ಪಿ.ಶಿವಣ್ಣ, ಶಿಕ್ಷಕರಾದ ಎಚ್.ವಿ.ಮೂರ್ತಿ, ಎಚ್.ಪಿ.ಲೋಹಿತ್, ಹಾಡಿಯ ಮುಖಂಡರಾದ ಜೆ.ಕೆ. ಮುತ್ತಮ್ಮ, ಸೈಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಅರ್ಜುನ್ ಮೌರ್ಯ, ಘಟಕದ ನಾಯಕರಾದ ಬಿ.ಜೆ.ಭುವನ್, ಪಿ.ಎಂ.ಸ್ನೇಹಾ, ಎ.ಕೆ. ಬಿಬಿನ್ ವರ್ಗೀಸ್, ಕೆ.ಸಿ.ಗಾನವಿ, ವಿದ್ಯಾರ್ಥಿಗಳು ಇದ್ದರು.