

ಸೋಮವಾರಪೇಟೆ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ತಾಲೂಕಿನ ವಿವಿಧ ಹಾಡಿಗಳಲ್ಲಿ ಪಡಿತರ ಚೀಟಿಯನ್ನು ಬುಧವಾರ ವಿತರಿಸಲಾಯಿತು.
ಸಂಗಯ್ಯನಪುರ, ಬಾಣಾವಾರ, ಮಾಲಂಬಿ, ಯಲಕನೂರು, ಆಡಿನಾಡೂರು ಹಾಡಿಗಳಿಗೆ ಭೇಟಿ ನೀಡಿದ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ, 102 ಕುಟುಂಬಗಳಿಗೆ ಪಡಿತರ ಚೀಟಿ ವಿತರಿಸಿದರು. ಮುಂದಿನ ದಿನಗಳಲ್ಲಿ ಉಳಿದ ಹಾಡಿಗಳಿಗೆ ಭೇಟಿ ನೀಡಿ ಅರ್ಜಿ ಸ್ವೀಕರಿಸಲಾಗುವುದು ಎಂದು ಇಲಾಖೆ ಆಹಾರ ನಿರೀಕ್ಷಕಿ ಯಶಸ್ವಿನಿ ತಿಳಿಸಿದರು. ಆಹಾರ ಇಲಾಖೆಯ ಸಹಾಯಕ ವಿನೋದ್ ಇದ್ದರು.