

ವಿಜಯಪುರ: ಮನೆಯಲ್ಲಿದ್ದ ವೃದ್ದನನ್ನು ಹಾಡಹಗಲೇ ಭೀಕರವಾಗಿ ಕೊಲೆಗೈದ ಘಟನೆ ನಗರದ ಗೋಡಬೋಳೆ ಮಾಳಾದಲ್ಲಿ ಸೋಮವಾರ ನಡೆದಿದೆ. ಸ್ಥಳೀಯ ನಿವಾಸಿ ವಿನಯ ನಾಯಕ್ (68) ಕೊಲೆಗೀಡಾದವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದು ಕತ್ತು ಕೊಯ್ದ ಗಾಯಗಳಾಗಿವೆ. ಹೊರ ಹೋದ ಕುಟುಂಬಸ್ಥರು ಮರಳಿ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದು ಕಳ್ಳತನ ಮಾಡಲು ಬಂದವರೇ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಎಸ್‌ಪಿ ಅನುಪಮ್ ಅಗರವಾಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಂಧಿ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.