ಹಸ್ತಕ್ಕೆ ಮತ ಹಾಕಿ ಸೇವೆ ಅವಕಾಶ ಮಾಡಿಕೊಡಿ

7kglphoto-6
Published on

ಕೊಳ್ಳೇಗಾಲ: ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡುವ ಮೂಲಕ ಜನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಮನವಿ ಮಾಡಿದರು.

ಪಟ್ಟಣದ ಬಸ್ತಿಪುರ, ನಂಜಯ್ಯನ ಕಟ್ಟೆ, ದೇವಾಂಗ ಪೇಟೆ, ದೊಡ್ಡನಾಯಕ ಬೀದಿ, ಚಿಕ್ಕ ನಾಯಕರ ಬೀದಿ, ಭೀಮನಗರ, ಸಾಮಂದಗೇರಿ ಬೀದಿ, ಆನಂದ ಜ್ಯೋತಿ ಕಾಲನಿ, ಹೊಸ ಅಣಗಳ್ಳಿ, ಹಳೇ ಕುರುಬರ ಬೀದಿ, ಅಮ್ಮನ್ ಕಾಲನಿ, ಕ್ರೈಸ್ತರ ಬೀದಿ, ನೂರುಮೊಹಲ್ಲಾ, ಲಿಂಗಣಾಪುರ, ಮಂಜುನಾಥನಗರ, ಆದರ್ಶನಗರ, ಉಪ್ಪಾರ ಮೋಳೆಯಲ್ಲಿ ಭಾನುವಾರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ನಾನು ನಿರಂತರ ಸೋಲು ಅನುಭವಿಸಿದರೂ, ಪ್ರಾಮಾಣಿಕವಾಗಿ ಜನಸೇವೆ ಮಾಡಲೇಬೇಕು ಎಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಇಲ್ಲಿವರೆಗೂ 6 ಬಾರಿ ಸೋತು ನೊಂದಿದ್ದೇನೆ. ಹೀಗಾಗಿ ಈ ಬಾರಿ ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ. 3 ಬಾರಿ ಸೋತ ಮಹೇಶ್‌ಗೆ ಮತ ನೀಡಿ ಗೆಲ್ಲಿಸಿದ್ದೀರಿ. ನಾನು ಆರು ಬಾರಿ ಸೋತಿರುವ ವ್ಯಕ್ತಿ. ಆದರೂ ಏಕೆ ನನ್ನ ಮೇಲೆ ಕನಿಕರವಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರಿಗೆ ಅನೇಕ ಭಾಗ್ಯಗಳನ್ನು ಕೊಟ್ಟಿದೆ. ಇದೀಗ ಗ್ಯಾರೆಂಟಿ ಕಾರ್ಡ್ ನೀಡಿದ್ದೇವೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದೆ ಬರುತ್ತದೆ. ಜನರಿಗೆ ಒಳಿತಾಗುತ್ತದೆ ಎಂದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಮಾಜಿ ಶಾಸಕ ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾಂಗ್ರೆಸ್ ಮುಖಂಡ ಓಲೆ ಮಹದೇವ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಎ.ಪಿ.ಶಂಕರ್, ಮನೋಹರ್, ಶಾಂತರಾಜು, ರಾಘವೇಂದ್ರ, ಮಂಜುನಾಥ್, ಮಾಜಿ ಸದಸ್ಯ ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್, ಮುಖಂಡರಾದ ಟಿ.ಪಿ ಬಸವಣ್ಣ, ಕೃಷ್ಣರಾಜು, ಪಾಪಣ್ಣ, ನರಸಿಂಹನ್, ಕರಾಟೆ ಕುಮಾರ್, ಮುಡಿಗುಂಡ ಶಾಂತರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net