ಹಸುಗೂಸಿನೊಂದಿಗೆ ಬಾವಿಗೆ ಹಾರಿದ ಗೃಹಿಣಿ

25hnr1 a (Vanita)
Published on

ಹೊನ್ನಾವರ: ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಎರಡು ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ವನಿತಾ ಮಂಜುನಾಥ ನಾಯ್ಕ (28) ಹಾಗೂ ಆಕೆಯ ಮಗಳು ಮನಸ್ವಿ (2) ಮೃತಪಟ್ಟವರು. ಶವವನ್ನು ಬಾವಿಯಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವನಿತಾಳ ಪತಿ ಮಂಜುನಾಥ ನಾಯ್ಕ ಮತ್ತು ನಾದಿನಿಯರು ಸೇರಿ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದಾರೆ ಎಂದು ಮೃತಳ ಸಹೋದರ ದಯಾನಂದ ನಾಯ್ಕ ಹೊನ್ನಾವರ ಠಾಣೆಗೆ ದೂರು ನೀಡಿದ್ದಾರೆ. ಕಳೆದ 4-5 ತಿಂಗಳಿಂದ ತನ್ನ ತಂಗಿಗೆ ಮೊಬೈಲ್​ಫೋನ್​ನಲ್ಲಿ ಮಾತನಾಡಲು ಬಿಡುತ್ತಿರಲಿಲ್ಲ. ಎರಡನೇ ಹೆಣ್ಣು ಮಗು ಹುಟ್ಟಿದ ಬಗ್ಗೆ ಸಂಶಯ ಮಾಡಿ ಹಿಯ್ಯಾಳಿಸುತ್ತಿದ್ದರು. ಅವಾಚ್ಯ ಶಬ್ದಗಳಿಂದ ಬೈಯುವುದು, ತನ್ನ ತಂಗಿಗೆ ಬೇರೆ ಕಡೆ ಸಂಬಂಧ ಇದೆ ಎಂದು ಹೇಳಿ ಸಂಶಯ ವ್ಯಕ್ತಪಡಿಸಿ ತನ್ನ ತಂಗಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಜಲವಳರ್ಕಯ ಮೃತಳ ಪತಿ ಆರೋಪಿತ ಮಂಜುನಾಥ ಈಶ್ವರ ನಾಯ್ಕ, ಮೃತಳ ಅತ್ತೆ ಸಾವಿತ್ರಿ ಈಶ್ವರ ನಾಯ್ಕ, ನಾದಿನಿಯರಾದ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ವಿರುದ್ಧ ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net