ಹಸು ಮೇಯಿಸಿದ ಕೆಎಎಸ್ ಅಧಿಕಾರಿ !

1308 KALAGI 01
Published on

ಕಾಳಗಿ: ವೀಕೆಂಡ್ ಬಂದರೆ ಸಾಕು ಬಹುತೇಕ ಜನರು ಪಾರ್ಟಿಗಳಲ್ಲಿ ಮಗ್ನರಾಗುತ್ತಾರೆ. ಇನ್ನು ಕೆಲವರು ಮನೆಗಳಲ್ಲಿಯೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಕೆಎಎಸ್ ಅಧಿಕಾರಿ ಹಸುಗಳನ್ನು ಮೇಯಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಅವರು ರೇವಗ್ಗಿಯ ರೇವಣಸಿದ್ಧೇಶ್ವರ ಗುಡ್ಡದಲ್ಲಿ ಹಸುಗಳನ್ನು ಮೇಯಿಸುವ ಮೂಲಕ ಕಾಳಜಿ ಮೆರೆದಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ರೇವಗ್ಗಿ(ರಟಕಲï) ರೇವಣಸಿದ್ಧೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ 295 ಜಾನುವಾರುಗಳಿದ್ದು, ಸಂಬAಧಿತರ ನಿರ್ಲಕ್ಷÈದಿಂದಾಗಿ ಜಾನುವಾರುಗಳು ಸೊರಗಿದ್ದವು. ಅಲ್ಲದೆ ಮೇವಿನ ಕೊರತೆಯಿಂದಾಗಿ ಗೋವುಗಳು ಮೃತಪಟ್ಟ ಉದಾಹರಣೆಗಳು ಸಾಕಷ್ಟಿವೆ.

ಹೀಗಾಗಿ ಸಹಾಯಕ ಆಯುಕ್ತರೂ ಆದ ದೇವಸ್ಥಾನದ ಆಡಳಿತಾಧಿಕಾರಿ ಆಶಪ್ಪ ಪೂಜಾರಿ ಅವರು ಶುಕ್ರವಾರ ರಾತ್ರಿಯೇ ಗುಡ್ಡಕ್ಕೆ ಆಗಮಿಸಿ ವಾಸ್ತವ್ಯ ಮಾಡಿದ್ದರು. ಶನಿವಾರ ಬೆಳಗ್ಗೆ 6 ಗಂಟೆಗೆ ಎಲ್ಲ ಗೋವುಗಳನ್ನು ಗೋಶಾಲೆಯಿಂದ ಹೊರಗೆ ಬಿಟ್ಟಿದ್ದು, ಗುಡ್ಡದ ಕಡೆ ಕಡೆದುಕೊಂಡು ಹೋಗಿ ಹಸಿ ಹುಲ್ಲನ್ನು ಮೇಯಿಸಿದ್ದಾರೆ. ಸುಮಾರು 10 ಗಂಟೆವರೆಗೂ ಗೋವುಗಳ ಆರೈಕೆ ಮಾಡಿದ್ದಾರೆ.

ನಿತ್ಯವೂ ಹಸುಗಳನ್ನು ಚನ್ನಾಗಿ ನೋಡಿಕೊಳ್ಳಬೇಕು, ಯಾವುದೇ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತನ್ನಿ. ಇನ್ಮುಂದೆ ಯಾವುದೇ ಕಾರಣಕ್ಕೂ ರೇವಗ್ಗಿ ಗುಡ್ಡದಲ್ಲಿ ಹಸುಗಳ ಸಾವಾಗಬಾರದು. ಜಾನುವಾರುಗಳ ಆರೋಗ್ಯದ ಕಡೆಗೂ ಗಮನಹರಿಸಿ ಎಂದು ಗೋಪಾಲಕರು ಹಾಗೂ ಗೋಶಾಲೆ ಸಿಬ್ಬಂದಿಗೆ ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net