

ಯಾದಗಿರಿ: ಇಂದಿರಾ ಕ್ಯಾಂಟೀನ್ ಬಡವರ ಹಸಿವು ನೀಗಿಸಲು ಪ್ರಾರಂಭಿಸಲಾಗಿದೆ. ಇದನ್ನು ಅರಿತು ಉಳ್ಳವರು ಯಾರೂ ಆಹಾರ ಸೇವನೆ ಮಾಡಲು ಬರಬಾರದು ಹಾಗೂ ಯಾರೂ ಆಹಾರ ಕೆಡಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಹೊಸ ಬಸ್ ನಿಲ್ದಾಣದ ಬಳಿ ನಿರ್ಮಾಣವಾದ ನೂತನ ಇಂದಿರಾ ಕ್ಯಾಂಟೀನ್ ಹಾಗೂ ನಗರಸಭೆಯ ಎಸ್‌ಬಿಎಂ ೧.೦ ಉಳಿತಾಯದ ಯೋಜನೆಯಡಿಯಲ್ಲಿ ಖರೀದಿಸಿದ ಹೊಸ ವಾಹನಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಬಡವರ ಹಸಿವು ನಿಗಿಸಲು ನಿರ್ಮಿತವಾದ ಈ ಇಂದಿರಾ ಕ್ಯಾಂಟೀನ್ ಉತ್ತಮ ಯೋಜನೆಗಳಲ್ಲಿ ಒಂದಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೂ ತುಂಬಾ ಅನುಕೂಲವಾಗಿವೆ ಎಂದು ಹೇಳಿದರು.
ಅಡುಗೆ ಮನೆ ಪರಿಶೀಲನೆ ನಡೆಸಿ, ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಅಲ್ಲಿದ್ದ ಸಿಬ್ಬಂದಿಗೆ ಸಚಿವರು ಸೂಚನೆ ನೀಡಿದರು. ನಗರದ ಪ್ರತಿಯೊಂದು ವಾರ್ಡ್ ಸ್ವಚ್ಛತೆ ಬಗ್ಗೆ ನಗರಸಭೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎ¯್ಲೆಂದರಲ್ಲಿ ಕಸದ ರಾಶಿ ಹಾಗೂ ಗಬ್ಬು ನಾರುತ್ತಿರುವ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಈ ವೇಳೆ ಜಿ¯್ಲÁಧಿಕಾರಿ ಬೋಯರ್ ಹರ್ಷಲ್, ಯೋಜನಾ ನಿರ್ದೇಶಕ ಲಕ್ಷಿö್ಮÃಕಾಂತ ರಡ್ಡಿ, ನಗರಸಭೆ ಅಧ್ಯಕ್ಷೆ ಮಹೆರೂನಬೇಗಂ ಲೀಯಾಖತ್ ಪಾಶಾ, ಉಪಾಧ್ಯP್ಷÀ ಭೀಮಬಾಯಿ ದೇವರಗೋನಾಳ, ಪೌರಾಯುಕ್ತರಾದ ಕೆ ಜೀವನ್, ಎಇಇ ನಾನಾಸಾಹೇಬ್ ಇತರರಿದ್ದರು.