ಹಸಿರು ಸಮೃದ್ಧ ಬದುಕಿನ ಉಸಿರು

9BK4
Published on

ಬಸವಕಲ್ಯಾಣ: ವಿಶ್ವದ ನಾಗರಿಕತೆಗಳು ಬೆಳೆದಿರುವುದೇ ಹಸಿರಿನ ಮಡಿಲಲ್ಲಿ. ನಿಸರ್ಗದ ಕಡೆಗಣನೆಯಿಂದ ಪ್ರಗತಿ ಸಾಧ್ಯವಿಲ್ಲ. ಹಸಿರು ಸಮೃದ್ಧ ಬದುಕಿನ ಉಸಿರು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.
ಹಾರಕೂಡ ಗ್ರಾಮ ಪಂಚಾಯಿತಿಯಿAದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಮಂಗಳವಾರ ಹಮ್ಮಿಕೊಂಡ ವನಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಅಭಿವೃದ್ಧಿ ನೆಪದಲ್ಲಿ ಕಾಡುಗಳೆಲ್ಲ ಕಾಂಕ್ರಿಟ್ ರೂಪ ತಳಿಯುತ್ತಿರುವುದು ಶೋಚನೀಯ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಸಾಮೂಹಿಕ ಜವಾಬ್ದಾರಿ ಹೊತ್ತು ಸಸ್ಯ ಶಾಮಲೆ ಉಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವನ ಮಹೋತ್ಸವ ಕಾರ್ಯಕ್ರಮ ಶ್ಲಾಘನೀಯ. ಮನೆ ಮಕ್ಕಳಂತೆ ಸಸಿಗಳನ್ನು ಬೆಳೆಸಿದರೆ ಅವು ನಮ್ಮನ್ನು, ನಮ್ಮ ಜೀವ ಸಂಕುಲವನ್ನು ಕಾಪಾಡುತ್ತವೆ. ಇದು ವೈಜ್ಞಾನಿಕ ಸತ್ಯ. ಗಿಡ ಮರಗಳನ್ನು ಬೆಳೆಸಿ ಉಳಿಸುವುದು ನಾಗರಿಕ ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದು ಶ್ರೀಗಳು ನುಡಿದರು.
ಕಾಂಗ್ರೆಸ್ ಮುಖಂಡೆ ಮಾಲಾ ಬಿ. ನಾರಾಯಣರಾವ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಮಂಜುನಾಥ ಪಿರಜಿ, ಸಿದ್ರಾಮ ಹೆಗಡೆ ಇತರರಿದ್ದರು. ಪಿಡಿಒ ವಿಷ್ಣುಕಾಂತ ರೆಡ್ಡಿ ಸ್ವಾಗತಿಸಿದರು. ಚನ್ನಪ್ಪ ಹೊಳಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net