

ಚಿತ್ರದುರ್ಗ:ಪರಿಸರ ಮಾಲಿನ್ಯ ನಿಯಂತ್ರಿಸಿ ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಯಟ್ ಪ್ರಾಚಾರ‌್ಯ ಎಂ.ನಾಸೀ ರುದ್ದೀನ್ ಹೇಳಿದರು. ಜಿಲ್ಲೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಹಸಿರು ಕ್ರಾಂತಿ ಯೋಜನೆ ಅನುಷ್ಠಾ ನಕ್ಕೆ ಸಂಬಂಧಿಸಿದಂತೆ ಬುಧವಾರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು,ಭವಿಷ್ಯದ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಪ್ಲಾಸ್ಟಿಕ್ ನಿಷೇಧ,ಬಟ್ಟೆ ಬ್ಯಾಗ್ ಬಳಕೆ,ವಾಯು,ಜಲ ಮಾಲಿನ್ಯ ಹಾಗೂ ಭೂ ಸವಕಳಿ ತಡೆಗಟ್ಟಬೇಕಿದೆ.
ಕಾರ‌್ಯಕ್ರಮಕ್ಕೆ ಸಂಬಂಧಿಸಿಂದಂತೆ ಸೆ.18ರಂದು go green ಸಂಸ್ಥೆಯವರು,ಬಿಆರ್‌ಸಿ,ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷ ಕರು,ಮುಖ್ಯಶಿಕ್ಷಕರು,ಶಿಕ್ಷಕರಿಗೆ ತರಬೇತಿ ನೀಡಲಿದ್ದಾರೆ ಎಂದರು. ಉಪನ್ಯಾಸಕರಾದ ಎಸ್.ಬಸವರಾಜು,ರಂಗಸ್ವಾಮಿ,ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸಂಪತ್‌ಕುಮಾರ್,ಸುರೇಂದ್ರನಾಥ್,ತಿಪ್ಪೇಸ್ವಾಮಿ,ತಿಪ್ಪೇರು ದ್ರಪ್ಪ,ಶ್ರೀನಿವಾಸ್,ತಿಪ್ಪೇಸ್ವಾಮಿ, ತಾಂತ್ರಿಕ ಸಹಾಯಕ ಅವಿನಾಶ್ ಇದ್ದರು.