ಹಸಿರು ಇದ್ದರೆ ಮಾತ್ರ ಉಸಿರು

h5-Dr. R.B. Patil college
Published on

ಹುಬ್ಬಳ್ಳಿ: ಪರಿಸರವಿಲ್ಲದೇ ಮನುಕುಲವಿಲ್ಲ. ಪರಿಸರ ನಾಶವೇ ವಿನಾಶಕ್ಕೆ ಕಾರಣ. ಹಸಿರು ಇದ್ದರೆ ಮಾತ್ರ ಉಸಿರು ಎಂಬುದನ್ನು ಪ್ರತಿಯೊಬ್ಬರು ಮರೆಯಬಾರದು ಎಂದು ಎನ್​ಎಲ್​ಇ ಸಂಸ್ಥೆಯ ಅಧ್ಯಕ್ಷ ಡಾ. ಪಿ.ವಿ. ದತ್ತಿ ಹೇಳಿದರು.

ನಗರದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿಯಲ್ಲಿರುವ ಡಾ.ಆರ್.ಬಿ. ಪಾಟೀಲ ಮಹೇಶ ವಿಜ್ಞಾನ ಪ.ಪೂ. ಕಾಲೇಜ್ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ರಾಜಾ ದೇಸಾಯಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಪರಿಸರ ಉಳಿಸಲು ಒಂದಾಗೋಣ. ಎಲ್ಲರೂ ಒಂದೊಂದು ಗಿಡಗಳನ್ನು ನೆಡುವುದರ ಮೂಲಕ ಉತ್ತಮ ಪರಿಸರಕ್ಕೆ ಕೊಡುಗೆ ನೀಡಿ ಎಂದು ಕರೆ ನೀಡಿದರು.

ಜಂಟಿ ಕಾರ್ಯದರ್ಶಿ ಶಿವರಾಮ ಹೆಗಡೆ, ಪ್ರಾಚಾರ್ಯ ರಾಮಮೋಹನ ಎಚ್. ಕೆ., ರಮೇಶ ಹೊಂಬಾಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net