ಹಸಿದವರಿಗೆ ರವಿ ಚಂದನಕೆರೆ ಅನ್ನದಾಸೋಹ

28BK1
Published on

ಬಸವಕಲ್ಯಾಣ: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ತೀವ್ರ ಸಮಸ್ಯೆಗೆ ಸಿಲುಕಿರುವ ಭಿಕ್ಷುಕರು, ನಿರ್ಗತಿಕರ ನೆರವಿಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕರೆ ಮುಂದಾಗಿದ್ದು, ನಿತ್ಯ ಮಧ್ಯಾಹ್ನದ ಊಟದ ವೇಳೆ ಅನ್ನ ದಾಸೋಹ ಮಾಡುತ್ತಿದ್ದಾರೆ.
ವಾಹನದಲ್ಲಿ ಸಮೇತ ಅನ್ನ ಸಾರಿನೊಂದಿಗೆ ನಗರ, ಸಸ್ತಾಪುರ ಬಂಗ್ಲಾ ಸೇರಿ ವಿವಿಧೆಡೆ ಸಂಚರಿಸುತ್ತರೆ. ಈ ವೇಳೆ ಎದುರಾಗುವ ನಿರ್ಗತಿಕರ ಜತೆಗೆ ಅಗತ್ಯ ವಸ್ತುಗಳ ಖರೀದಿಗೆ ಹಳ್ಳಿಗಳಿಂದ ಬರುವ ಕೂಲಿ ಕಾರ್ಮಿಕರಿಗೆ, ಹಣ ಪಡೆಯಲು ಬ್ಯಾಂಕ್ಗೆ ಬರುವ ಬಡ ಜನರಿಗೆ ಊಟಕ್ಕೆ ನೀಡುತ್ತಿದ್ದಾರೆ.
ಲಾಕ್​ಡೌನ್​ನಿಂದ ನಗರದಲ್ಲಿ ಹೋಟೆಲ್ಗಳು ಬಂದಾಗಿದ್ದರಿಂದ ಭಿಕ್ಷುಕರು, ನಿರ್ಗತಿಕರು, ಅಸಹಾಯಕರು ಸಮಸ್ಯೆಗೆ ಸಿಲುಕಿದ್ದರು. ಇಂಥವರನ್ನು ಹುಡುಕಿಕೊಂಡು ಹೋಗಿ ಅವರ ಎದುರು ಪತ್ರೋಳಿ ಹಾಕಿ ಊಟಕ್ಕೆ ಬಡಿಸುವ ಮೂಲಕ ಅವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಎರಡು ವಾರದಿಂದ ನಿತ್ಯ ಅನ್ನ ದಾಸೋಹ ಕಾರ್ಯದಲ್ಲಿ ತೊಡಗಿರುವ ಅವರು, ನಿತ್ಯ ನೂರಾರು ಜನರಿಗೆ ಊಟ ಬಡಿಸುವ ಕಾರ್ಯಕ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಬೀದಿ ನಾಯಿಗಳಿಗೆ ಅನ್ನ ಹಾಕುತ್ತಿದ್ದಾರೆ. ಹೀಗಾಗಿ ಕೆಲವೆಡೆ ಇವರ ವಾಹನ ಬಂದರೆ ಇವು ಓಡಿ ಬರುತ್ತಿವೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net