‘ಹಸಿದವರಿಗೆ ಅನ್ನ’ ಯೋಜನೆಯ ಭಿತ್ತಿಪತ್ರ ಬಿಡುಗಡೆ

4444444444
Published on

ಧಾರವಾಡ: ಹುಬ್ಬಳ್ಳಿಯ ಕರಿಯಪ್ಪ ಶಿರಹಟ್ಟಿ ಸೇವಾ ಸಂಸ್ಥೆಯು ಹಲವಾರು ವರ್ಷಗಳಿಂದ ನಿರ್ಗತಿಕರಿಗೆ, ಹಸಿದವರಿಗೆ ಅನ್ನ ದಾಸೋಹ ಮಾಡುತ್ತ ಬಂದಿರುವುದು ಶ್ಲಾಘನೀಯ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ಶಿರಹಟ್ಟಿ ಸೇವಾ ಸಂಸ್ಥೆಯು ಆರಂಭಿಸಲಿರುವ ‘ಹಸಿದವರಿಗೆ ಅನ್ನ ಜೋಳಿಗೆ’ ಯೋಜನೆಯ ಭಿತ್ತಿಪತ್ರವನ್ನು ನಗರದ ತಮ್ಮ ಆಸ್ಪತ್ರೆಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶಿರಹಟ್ಟಿಯವರು ಪ್ರಾರಂಭಿಸುತ್ತಿರುವ ಅನ್ನ ದಾಸೋಹ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ಆಧುನಿಕ ಕಾಲದಲ್ಲಿ ಇವರ ಸೇವಾ ಕಾರ್ಯವು ಇತರರಿಗೆ ಮಾದರಿ. ಈ ಸೇವಾ ಕಾರ್ಯದಲ್ಲಿ ಕೈ ಜೋಡಿಸುತ್ತೇನೆ ಎಂದರು.
ಸೇವಾ ಸಂಸ್ಥೆಯ ಅಧ್ಯಕ್ಷ ಕರಿಯಪ್ಪ ಶಿರಹಟ್ಟಿ, ಚಿದಂಬರ ನಿಂಬರಗಿ, ಶರಣು ಗೋಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net