ಹಸಿದ ಕಾರ್ವಿುಕರಿಗೆ ಊಟ ನೀಡಿದ ಪೊಲೀಸರು

30 vikram 6
Published on

ಧಾರವಾಡ/ನವಲಗುಂದ: ಲಾಕ್​ಡೌನ್ ಸಂದರ್ಭದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು ಲಾಠಿ ಪ್ರಯೋಗದಲ್ಲಿ ತೊಡಗಿದ್ದಾರೆ. ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಜನರನ್ನು ನಿಯಂತ್ರಿಸುವ ಜತೆಗೆ ಹಸಿದ ಕಾರ್ವಿುಕರಿಗೆ ಸ್ವತಃ ಊಟವನ್ನು ಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಜಸ್ಥಾನದಿಂದ ಶಿವಮೊಗ್ಗಕ್ಕೆ ಲಾರಿಗಳಲ್ಲಿ ಹೊರಟಿದ್ದ ಕಾರ್ವಿುಕರು ಊಟ ಸಿಗದೆ ಪರದಾಡುತ್ತಿದ್ದರು. ಅವರು ಧಾರವಾಡದ ತೇಗೂರು ಚೆಕ್​ಪೋಸ್ಟ್ ಬಳಿ ಆಗಮಿಸಿದ ಸಂದರ್ಭದಲ್ಲಿ ಪೊಲೀಸರು ಅವರ ಮಾಹಿತಿ ಪಡೆದಿದ್ದಾರೆ. ಆಗ ಅವರು ಹಸಿವೆಯಿಂದ ಬಳಲುತ್ತಿದ್ದಾರೆ ಎಂಬುದು ಗೊತ್ತಾಯಿತು.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್ಪಿ ಕಟಿಯಾರ್ ಅನ್ನ, ಸಾಂಬಾರ್ ವ್ಯವಸ್ಥೆ ಮಾಡಿದ್ದಲ್ಲದೆ, ಹಸಿದ ಕಾರ್ವಿುಕರಿಗೆ ಸ್ವತಃ ತಾವೇ ಊಟ ಬಡಿಸಿದರು. ಬಂದ್ ಇದ್ದ ಸಂದರ್ಭದಲ್ಲಿ ಪೊಲೀಸರು ಹೊಡೆಯುತ್ತಾರೆ, ಬೆದರಿಸುತ್ತಾರೆ ಎಂಬ ಅಪವಾದಕ್ಕೆ ವಿರುದ್ಧವಾಗಿ ಇವರು ನಡೆದುಕೊಂಡಿದ್ದಾರೆ. ಈ ಕುರಿತು ಪತ್ರಿಕ್ರಿಯಿಸಿದ ವರ್ತಿಕಾ ಕಟಿಯಾರ್, ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ 100ಕ್ಕೂ ಹೆಚ್ಚು ಕಾರ್ವಿುಕರು ತೇಗೂರು ಚೆಕ್​ಪೋಸ್ಟ್​ಗೆ ಬಂದಾಗ ಅವರು ಊಟ ಮಾಡಿಲ್ಲ ಎಂಬ ಮಾಹಿತಿ ತಿಳಿಯಿತು. ಹೀಗಾಗಿ ಊಟ ತರಿಸಿ ವಿತರಣೆ ಮಾಡಿದ್ದೇವೆ ಎಂದು ಹೇಳಿದರು.

ವಿದ್ಯಾರ್ಥಿ ನಿಲಯದಲ್ಲಿ ವ್ಯವಸ್ಥೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇತರ ಜಿಲ್ಲೆಗಳಿಗೆ ತೆರಳುತ್ತಿದ್ದ ಕಟ್ಟಡ ಕಾರ್ವಿುಕ ಸೇರಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರಿಗೆ ಇಲ್ಲಿನ ನರೇಂದ್ರ ಹೆದ್ದಾರಿ ಟೋಲ್ ಬಳಿಯ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ಊಟ ನೀಡಿದ್ದಾರೆ. ಚೆಕ್​ಪೋಸ್ಟ್​ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಲಾರಿ ಹಾಗೂ ವಿವಿಧ ಸರಕು ಸಾಗಾಣಿಕೆ ವಾಹನಗಳ ಮೂಲಕ ತೆರಳುತ್ತಿದ್ದ ವಲಸಿಗ ಕಾರ್ವಿುಕರನ್ನು ಪೊಲೀಸರು ಗುರುತಿಸಿದ್ದಾರೆ. ನಂತರ ಎಸ್​ಪಿ ಅವರ ಮಾರ್ಗದರ್ಶನದಂತೆ ಡಿವೈಎಸ್​ಪಿ ರವಿ ನಾಯಕ್ ಹಾಗೂ ಗ್ರಾಮೀಣ ಪಿಎಸ್​ಐ ಮಹೇಂದ್ರಕುಮಾರ ನಾಯಕ್ ಅವರು ಟೋಲ್ ರಸ್ತೆಯಲ್ಲೇ 26 ಜನ ಕಾರ್ವಿುಕರಿಗೆ ಊಟ ಹಾಗೂ ಹಣ್ಣುಗಳನ್ನು ನೀಡಿದ್ದಾರೆ. ಬಳಿಕ ಈ ಎಲ್ಲ ಕಾರ್ವಿುಕರನ್ನು ತಮ್ಮ ವಾಹನದಲ್ಲೇ ಕರೆತಂದು ಗೌರಿಶಂಕರ ವಿದ್ಯಾರ್ಥಿ ನಿಲಯದಲ್ಲಿ ವಸತಿ ಕಲ್ಪಿಸಿದ್ದಾರೆ.

ಗುಡಿಸಲು ವಾಸಿಗಳಿಗೆ ಅನ್ನ: ನವಲಗುಂದ ಪೊಲೀಸರು ಸಂಕಷ್ಟದಲ್ಲಿ ಬುದ್ದಿಮಾಂದ್ಯ ಹಾಗೂ ಗುಡಿಸಲು ವಾಸಿಗಳಿಗೆ ಸೋಮವಾರ ಮಾಸ್ಕ್, ಊಟ, ಉಪಾಹಾರ ನೀಡಿ ಮಾನವೀಯತೆ ಮೆರೆದರು. ಪಿಎಸ್​ಐ ಜಯಪಾಲ ಪಾಟೀಲ, ತಹಸೀಲ್ದಾರ್ ನವೀನ ಹುಲ್ಲೂರ, ಪುರಸಭೆ ಮುಖ್ಯಾಧಿಕಾರಿ ಎನ್.ಎಚ್. ಖುದಾವಂದ್ ತಮ್ಮ ಸಿಬ್ಬಂದಿ ಲಾಕ್​ಡೌನ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮá-ನ್ನೆಚ್ಚರಿಕೆ ವಹಿಸಿದ್ದಾರೆ. ಈವರೆಗೆ ಯಾರಲ್ಲಿಯೂ ಕರೊನಾ ಸೋಂಕು ದೃಢಪಟ್ಟಿಲ್ಲ. ಆದರೆ, ಈ ಹಿಂದೆ ವಿದೇಶದಿಂದ ಬಂದಿದ್ದ ಏಳು ಜನರನ್ನು ವೈದ್ಯಾಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, 14 ದಿನಗಳವರೆಗೆ ಗೃಹ ಬಂಧನದಲ್ಲಿರುವಂತೆ ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net