ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿ ವಿತರಣೆ

IMG-20241204-WA0010
Published on

ಚಾಮರಾಜನಗರ: ನಗರದ 14ನೇ ವಾರ್ಡ್‌ ನಿವಾಸಿಗಳಿಗೆ ವಾರ್ಡ್‌ನ ಸದಸ್ಯ ಚಿನ್ನಮ್ಮ ಸಿದ್ದರಾಮಯ್ಯ ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿ ವಿತರಣೆ ಮಾಡಿದರು.

ವಾರ್ಡ್‌ನಲ್ಲಿ ನಗರಸಭೆ ವತಿಯಿಂದ ನೀಡಲಾಗಿರುವ ಹಸಿಕಸ, ಒಣಕಸ ಸಂಗ್ರಹಣೆ ಬುಟ್ಟಿ ವಿತರಿಸಿದ ಚಿನ್ನಮ್ಮ ಮಾತನಾಡಿ, ವಾರ್ಡನ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗಿದೆ. ನಗರಸಭಾ ವತಿಯಿಂದ ನೀಡಲಾಗಿರುವ ಹಸಿಕಸ, ಒಣಕಸ ಬುಟ್ಟಿಯಲ್ಲಿ ಹಸಿಕಸ, ಒಣಕಸ ಶೇಖರಣೆ ಮಾಡಿ ಬಡಾವಣೆಗೆ ಬರುವ ನಗರಸಭಾ ಕಸದ ವಾಹನ ಅಥವಾ ಸಿಬ್ಬಂದಿಗೆ ನೀಡುವ ಮೂಲಕ ಸ್ವಚ್ಚತೆಗೆ ಸಹಕರಿಸಬೇಕು ಎಂದು ನಿವಾಸಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಪರಿಸರ ಇಂಜಿನಿಯರ್ ರೂಪ, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಮಂಜುನಾಥ್, ಯಜಮಾನರಾದ ಗುರುಸ್ವಾಮಿ, ನಾಗರಾಜು, ಶಿವಣ್ಣ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net