ಹವಾ ಮಲ್ಲಿನಾಥರ ದೇಶ ಸೇವೆ ಮಾದರಿ

Mallayya mutya birthday
Published on

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಹವಾ ಮಲ್ಲಿನಾಥ ಮಹಾರಾಜರ (ನಿರಗುಡಿ ಮುತ್ತ್ಯಾ) 55ನೇ ಜನ್ಮ ದಿನವನ್ನು ನಗರದ ಐಎಂಎ ಹಾಲ್ ಹತ್ತಿರದ ಶಂಭುಲಿಂಗ ಆಶ್ರಮದಲ್ಲಿ ಆಚರಿಸಲಾಯಿತು.

55 ಕೆಜಿ ಕೇಕ್ ಕತ್ತರಿಸಲಾಯಿತು. ಭಕ್ತರು, ಅಭಿಮಾನಿಗಳಿಗೆ ಅನ್ನ ದಾಸೋಹ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜಕಾರಣಿಗಳು, ಗಣ್ಯರು, ಮುಖಂಡರು, ಸ್ವಾಮೀಜಿಗಳು, ಹವಾ ಮಲ್ಲಿನಾಥ ಮಹಾರಾಜರ ಧಾರ್ಮಿಕ, ಸಾಮಾಜಿಕ ಹಾಗೂ ದೇಶ ಸೇವೆಯನ್ನು ಕೊಂಡಾಡಿದರು.ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಒಂಭತ್ತು ವರ್ಷದವರಿದ್ದಾಗ ಮುತ್ತ್ಯಾ ಅವರು ಮನೆ ಬಿಟ್ಟು ದೇಶ, ಸಮಾಜದ ಉದ್ಧಾರಕ್ಕಾಗಿ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಜಾತಿ, ಧರ್ಮಕ್ಕಿಂತ ದೇಶ ಶ್ರೇಷ್ಠ ಎಂಬ ಸಂದೇಶ ಸಾರುತ್ತ ಸಮಾಜವನ್ನು  ಬಡಿದೆಬ್ಬಿಸುತ್ತಿದ್ದಾರೆ. ಎಲ್ಲ ಧರ್ಮದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಮಾದರಿ ಎಂದು ಬಣ್ಣಿಸಿದರು.

ಖಾನಾಪುರ ಆನಂದ ಆಶ್ರಮದ ಜಗದೀಶ್ವರಿ ಮಾತೆ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಡಿವೈಎಸ್ಪಿ ಕೆ.ಎಂ.ಸತೀಶ, ಸಿದ್ದಲಿಂಗಯ್ಯ ಸ್ವಾಮೀಜಿ, ಕಾಶೀನಾಥ ಬೆಲ್ದಾಳೆ, ಜಗದೀಶ ಖೂಬಾ, ವೀರಶೆಟ್ಟಿ ಖ್ಯಾಮಾ, ನಾಗರಾಜ ಲದ್ದೆ, ಅಮೃತಪ್ಪ, ವಿವೇಕ್ ವಾಲಿ, ದಿಲೀಪ್ ಪಾಟೀಲ್, ಆಕಾಶ ಜನವಾಡ, ಶಿವಸಾಗರ, ಅಜಯ ಕುದುರೆ, ರವಿ ಕೋಡಗೆ, ಹಣ್ಮು ಪಾಜಿ, ಸೀನು ಮಾಶೆಟ್ಟಿ, ವಿಜು ವಡ್ಡೆ, ಸಾಗರ ತರನಳ್ಳಿ ಇತರರಿದ್ದರು. ಕಾರ್ಯಕ್ರಮ ಆಯೋಜಕರಾದ ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲೂಕು ಅಧ್ಯಕ್ಷ ಪಪ್ಪು ಪಾಟೀಲ್ ಖಾನಾಪುರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಾಗಶೆಟ್ಟಿ ಧರಂಪುರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net