ಹಳ್ಳಿಯ ಮದುವೆ ಸಂಭ್ರಮ ಹೆಚ್ಚಿಸಿದ ವಿದೇಶಿಯರು

bkt-18-12
ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಭಾನುವಾರ ನಡೆದ ವೆಂಕಟೇಶ ಮೇಟಿ ಹಾಗೂ ಕಾವ್ಯಾ ಅವರ ಮದುವೆಯಲ್ಲಿ ವೆಂಕಟೇಶ್ ಅವರ ವಿದೇಶಿ ಸ್ನೇಹಿಯರು ಭಾಗವಹಿಸಿರುವುದು.
Published on

ಬಾಗಲಕೋಟೆ: ಜರ್ಮನ್ ನಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿರುವ ಯುವಕನ ಮದುವೆ ತನ್ನ ಹುಟ್ಟೂರನಲ್ಲಿ ನಡೆಯಿತು. ಮದುವೆಯಲ್ಲಿ ವಿದೇಶಿ ಸ್ನೇಹಿತರು ಭಾಗವಹಿಸಿ, ವಿವಾಹ ಸಂಭ್ರಮದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಭಗವತಿ ಗ್ರಾಮದ ವೆಂಕಟೇಶ ಮೇಟಿ ಎನ್ನುವ ಯುವಕ ಸದ್ಯ ಜರ್ಮನ್ ನಲ್ಲಿ ಉದ್ಯೋಗಿಯಾತಗಿದ್ದು, ಇತನ ವಿವಾಹ ವಿಜಯಪುರ ಜಿಲ್ಲೆಯ ಮಲಘಾಣ ಗ್ರಾಮದ ಕಾವ್ಯಾ ಶಿರೋಳ ಎನ್ನುವವರ ಜೊತೆ ನಡೆಯಿತು. ಮದುವೆ ಯುವಕನ ಹುಟ್ಟೂರು ಭಗವತಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಜರುಗಿತು.

ವೆಂಕಟೇಶನ ಮದುವೆಗಾಗಿ ಆತನ ೧೨ ಜನ ವಿದೇಶಿ ಸ್ನೇಹಿತರು ಐದು ದಿನಗಳ ಕಾಲ ಗ್ರಾಮಕ್ಕೆ ಆಗಮಿಸಿ, ಹಳ್ಳಿಯ ವಾತಾವರಣ ಸಂಭ್ರಮಿಸಿದರು. ಜರ್ಮನ್ ನಲ್ಲಿ ವೆಂಕಟೇಶ್ ಎಂಎಸ್ಸಿ ಓದಿ, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನ ಸ್ನೇಹಿತರು ಸದ್ಯ ಅಮೇರಿಕಾ, ಇಂಗ್ಲೆಂಡ್, ನೆದರಲ್ಯಾಂಡ್, ಡೆನ್ಮಾರ್ಕ, ಜರ್ಮನಿ, ಅಲ್ಮೇರಿಯಾದಿಂದ ಒಟ್ಟು ೧೨ ಜನರ ಯುವಕ, ಯುವತಿಯರು ಬಂದಿದ್ದರು.

ಮದುವೆ ವೇಳೆ ವಿದೇಶಿ ಸ್ನೇಹಿತರು ಸಹ ಪಕ್ಕಾ ದೇಶಿ ಉಡುಪು ಧರಿಸಿ, ಹಾಡು, ನೃತ್ಯ ಮಾಡುವ ಮೂಲಕ ಮದುವೆ ಬಂದಿದ್ದವರ ಗಮನ ಸೆಳೆದರು. ಐದು ದಿನಗಳಲ್ಲಿ ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬನಶಂಕರಿ, ಮಹಾಕೂಟಕ್ಕೆ ತೆರಳಿದ್ದರು. ಒಂದು ದಿನ ಎತ್ತಿನ ಚಕ್ಕಡಿಯಲ್ಲಿ ಭಗವತಿಯಲ್ಲಿ ಇರುವ ವೆಂಕಟೇಶ ಅವರ ಹೊಲಕ್ಕೆ ತೆರಳಿ ಹೊಲದಲ್ಲಿ ಕುಳಿದು ಪಕ್ಕಾ ಉತ್ತರ ಕರ್ನಾಟಕದ ಜವಾರಿ ಊಟ ಸವೆದರು. ಸ್ನೇಹಿತನ ಮದುವೆಗಾಗಿ ಅವರೆಲ್ಲ ಬಂದಿದ್ದು, ನಮಗೆ ಬಹಳ ಸಂತೋಷ ಆಯಿತು ಎಂದು ವೆಂಕಟೇಶ ಅವರ ಸಂಬಂಽ ಬಾಗಲಕೋಟೆ ಕಸಾಪ ತಾಲೂಕು ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net