ಹಳ್ಳಿಮೈಸೂರು ಹೋಬಳಿ‌ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ: ಯೋಗಾರಮೇಶ್

ಹಳ್ಳಿಮೈಸೂರು ಹೋಬಳಿ‌ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ:  ಯೋಗಾರಮೇಶ್
Published on

ಹೊಳೆನರಸೀಪುರ : ಜಿಲ್ಲೆಯಲ್ಲೆ ಹಳ್ಳಿಮೈಸೂರು ಹೋಬಳಿ‌ ಹಿಂದುಳಿದ ಹಾಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹೊಳೆನರಸೀಪುರ ತಾಲ್ಲೂಕಿಗೆ ಸೇರಿದ ಈ ಹೋಬಳಿಯನ್ನು ಸೋಲಿನ ಭಯದಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ ಹಿಂದುಳಿಯಲು ಕಾರಣರಾಗಿದ್ದಾರೆ ಹಾಗೂ ಈ ಹೋಬಳಿಗೆ ದ್ರೋಹ ಎಸಗಿದ್ದಾರೆ. ಇಂತಹ ದ್ರೋಹ ಮಾಡಿದ ಜೆಡಿಎಸ್ ಕುಟುಂಬವನ್ನು ಈ ಹೋಬಳಿಯ ಜನರು   ಯಾವತ್ತಿಗೂ ಕ್ಷಮಿಸಬಾರದು ಎಂದು ಬಿಜೆಪಿ ಪಕ್ಷದ ಮುಖಂಡ ಹೆಚ್ ಯೋಗಾರಮೇಶ್ ಹೇಳಿದ್ದಾರೆ.     

  ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಮೈಸೂರ್ ಹೋಬಳಿಯ ಮಾಕಬಳ್ಳಿ ಗ್ರಾಮದಲ್ಲಿ ಬೂತ್ ವಿಜಯಸಂಕಲ್ಪ ಅಭಿಯಾನದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸುವ ಬಗ್ಗೆ ಮನೆ ಮನೆಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು   ಎ.ಮಂಜು ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ  ರಾಜಕಾರಣ ಮಾಡಿ ಮಂತ್ರಿಯಾಗಿದ್ದು, ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ದ  ಇರುವ ಜನರ ಪರ ಇದೀನಿ ಎಂಬ ಮಾತುಗಳಿಂದ ಈ ಜಿಲ್ಲೆಯಲ್ಲಿ ಆ ವರ್ಗದ ಜನರನ್ನು ನಂಬಿಸಿ ರಾಜಕಾರಣ ಮಾಡಿ,   ಇಂದು ದೇವೇಗೌಡರ ಕುಟುಂಬದವರ ಕಾಲು ಹಿಡಿದು ಅಧಿಕಾರಕ್ಕಾಗಿ ಅವರಿಗೆ ಶರಣಾಗಿದ್ದಾರೆ ಎಂದು ತಿಳಿಸಿದರು.

 ಮಂಜು ರವರ ಗೆಲುವಿನಲ್ಲಿ ಅವರ ಸಾಧನೆ ಇರಲಿಲ್ಲ ದೇವೇಗೌಡರ ಕುಟುಂಬದ ವಿರುದ್ದ ಇದಿನಿ ಎಂಬ ಮಾತುಗಳಿಂದ ರಾಜಕಾರಣ ಮಾಡಿದ್ದಾರೆ. ರಾಜಕೀಯ ವ್ಯಕ್ತಿ ಬದ್ದತೆಯಿಂದ‌, ವ್ಯಕ್ತಿಗತ ವಿಚಾರಗಳನ್ನು ಇಟ್ಟುಕೊಳ್ಳಬೇಕು ಆ ಬದ್ದತೆ ಎ.ಮಂಜು ರವರಿಗೆ ಇಲ್ಲ ಎಂದು ಹರಿಹಾಯ್ದರು.

 ಎ ಮಂಜು ಭ್ರಮೆಯಲ್ಲಿದ್ದಾರೆ ನಾನು ಜೆ.ಡಿ.ಎಸ್ ಗೆ ಹೋದ್ರೆ ಸುಲಭವಾಗಿ ಗೆಲುವು ಸಾಧಿಸಬಹುದೆಂದು ಅಂದುಕೊಂಡಿದ್ದಾರೆ ಈ ಕ್ಷೇತ್ರದಲ್ಲಿ ಜೆ.ಡಿ.ಎಸ್ ಹಲವಾರು ಭಾಗಗಳಾಗಿ ಹರಿದು ಹಂಚಿ ಹೋಗಿದೆ.ಹೇಚ್ ಡಿ ರೇವಣ್ಣ ರವರು ಏಳಕ್ಕೆ‌ ಏಳು ಗೆಲ್ತೀವಿ ಅಂತಾರೆ ಆದರೆ ಅವರ ಪಕ್ಷದಲ್ಲೆ ಒಡಕಿದೆ.

ಎ.ಮಂಜು ಜೆ.ಡಿ.ಎಸ್ ಸೇರ್ಪಡೆ ಒಂದು‌ ಅಪವಿತ್ರ ಮೈತ್ರಿ . ಸಂಸದ ಪ್ರಜ್ವಲ್ ರೇವಣ್ಣ ರವರ ಮೇಲಿನ  ಕೇಸು ನ್ಯಾಯಾಲಯದಲ್ಲಿದೆ ಈ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವ ಸಲುವಾಗಿ ರೇವಣ್ಣ ಹಾಗೂ ಕುಟುಂಬ ಮಂಜುರವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ, ಇದರ ಹಿನ್ನೆಲೆ ನೋಡಿದ್ರೆ ಈ‌ ಕ್ಷೇತ್ರದಲ್ಲಿ ಜೆಡಿಎಸ್ ದುರ್ಬಲವಾಗಿದೆ ಎನ್ನುವುದು ಸ್ಪಷ್ಟ ಎಂದು ವ್ಯoಗ್ಯವಾಡಿದ್ದಾರೆ.

  2004 ಕ್ಕಿಂತ ಮೊದಲು ಶಾಸಕ ಎ.ಟಿ ರಾಮಸ್ವಾಮಿ ಜೆ.ಡಿ.ಎಸ್ ನಾಯಕರನ್ನು ಬೈಯುತ್ತಿದ್ದರು. 2004 ರಿಂದ  ಶಾಸಕರಾದ ಮೇಲೆ ಒಂದೆ ಒಂದು‌ ದಿನ ದೇವೇಗೌಡರ ಕುಟುಂಬದ ವಿರುದ್ದ ಮಾತನಾಡಲಿಲ್ಲ, ಇವಾಗ ಮಾತನಾಡಲು ಪ್ರಾರಂಭಿಸಿದ್ದಾರೆ, ಎ.ಮಂಜು ಮುಂಚೆ ದೇವೇಗೌಡರ ವಿರುದ್ದ ಮಾತನಾಡಿ ಇವಾಗ  ಸೇರ್ಪಡೆಗೊಂಡ ಬಳಿಕ ಇವರ ಬಾಯಿ ಬಂದ್ ಆಗಿದೆ. ಸೋಲಿನ ಭಯ ಹಾಗೂ ಜೆಡಿಎಸ್ ಪಕ್ಷ ದುರ್ಬಲಗೊಂಡಿದ್ದರಿಂದ ಮಂಜು ಅಂತವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂದರು.

ಎ.ಟಿ ರಾಮಸ್ವಾಮಿ ರವರಿಗೆ ದೇವೇಗೌಡರು ಬೆಂಗಳೂರು ಭೂ ಒತ್ತುವರಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಅಧಿಕಾರ ಕೊಡಿಸಿದ್ದರು ರಾಮಸ್ವಾಮಿ ಹೆಸರು ಈ ರಾಜ್ಯಕ್ಕೆ ಗೊತ್ತಾಗಬೇಕಾದ್ರೆ ಅದಕ್ಕೆ ದೇವೇಗೌಡರೆ ಕಾರಣ ಎಂದರು. ಜೆ.ಡಿಎಸ್ ಕಾರ್ಯ ಕರ್ತರು ದಂಗೆ ಎದ್ದು ರಾಮಸ್ವಾಮಿಗೆ ಟಿಕೆಟ್ ನೀಡಿದ್ರೆ ಈ ಬಾರಿ ಪಕ್ಷವನ್ನು ಸೋಲಿಸುತ್ತೇವೆ ಎಂದು ಹೇಳಿದ ಮೇಲೆ ಟಿಕೆಟ್ ಕೈ ತಪ್ಪಿದ್ದರಿಂದ ಈ ಹೋಬಳಿಗೆ ಆಗಾಗ ಬಂದು ರೇವಣ್ಣ ರವರ ವಿರುದ್ದ ಜೆ.ಡಿ.ಎಸ್ ನಾಯಕರ ವಿರುದ್ದ ರಾಮಸ್ವಾಮಿ ಮಾತನಾಡುತ್ತಾರೆ ಎಂದರು.

ಎ.ಮಂಜು ಅಥವಾ ರಾಮಸ್ವಾಮಿ ಬಿಜೆಪಿ ಗೆ ಬರುವ ಬಗ್ಗೆ ಎಂದ ಯಾವುದೆ ಚರ್ಚೆಯಾಗಿಲ್ಲ.

ರಾಮಸ್ವಾಮಿ ಅವರು ಎರಡೂ ಪಕ್ಷಗಳಿಂದ ತಿರಸ್ಕಾರಗೊಂಡಿದ್ದಾರೆ ಅವರು ಸೋಲುವ ಅಭ್ಯರ್ಥಿ ಎಂದರು. 

ಈ ಕ್ಷೇತ್ರದಲ್ಲಿ‌ ನಾನೆ ಅಭ್ಯರ್ಥಿ ಎಂದು ಹೇಳಲ್ಲ ಪಕ್ಷ ಯಾರನ್ನೆ ತೀರ್ಮಾನಿಸಿದರೂ ಕೆಲಸ‌ ಮಾಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net