ಹಳ್ಳಿಗೆ ಶುದ್ಧ ತಂಪಾದ ನೀರು

2203KLB10
Published on

ಕಲಬುರಗಿ: ಎಲ್ಲೆಡೆ ಬಿರು ಬೇಸಿಗೆಯ ತಾಪ ತೀವ್ರವಾಗಿದ್ದು, ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕುಡಿಯುವ ನೀರಿನ ತೀವ್ರ ತತ್ವಾರ ಉಂಟಾಗುತ್ತಿದ್ದು, ಅದನ್ನು ನೀಗಿಸಲು ಗುಲ್ಬರ್ಗ ದಣ ವಿಧಾನಸಭೆ ೇತ್ರದ 20 ಹಳ್ಳಿಗಳಿಗೆ ಶುದ್ಧ ತಂಪು ನೀರು ವಿತರಣೆಗೆ ದಣ ೇತ್ರದ ಬಿಜೆಪಿ ಮುಖಂಡ ಬಿ.ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ.

ಬೇಸಿಗೆಯಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಪದೇ ಪದೆ ಕಂಡು ಬರುತ್ತಿದೆ. ಶುದ್ಧ ನೀರು ದೊರೆಯುವುದು ಕಷ್ಟಕರವಾಗಲಿದೆ. ಜನರ ಸಮಸ್ಯೆ ಮನಗಂಡು ಅರವಟಿಕೆಗಳ ಮಾದರಿ ಶುದ್ಧೀಕರಿಸಿದ ತಂಪು ನೀರಿನ ಕ್ಯಾನ್​ಗಳನ್ನು ಪ್ರತಿ ಗ್ರಾಮಗಳಿಗೆ ಪೂರೈಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ನಿತ್ಯ ಬೆಳಗ್ಗೆಯಿಂದಲೇ ಕಲಬುರಗಿ ನಗರದಿಂದಲೇ ಶುದ್ಧ ನೀರಿನ ವಾಹನಗಳು ಸುತ್ತಲಿನ ಹಳ್ಳಿಗಳಿಗೆ ನೀರು ಸ್ವಯಂ ಪ್ರೇರಿತವಾಗಿ ಪೂರೈಸಲಾಗುತ್ತಿದೆ. ನೀರಿನ ದಾಹ ನೀಗಿಸುವ ಭಾಗ್ಯ ದೊರಕಿದ್ದು, ಸಾರ್ವಜನಿಕರು ನೀರು ಕುಡಿದು ಆರಾಮಾಗಿ ಇದ್ದರೆ ಅದೇ ದೊಡ್ಡ ಶಕ್ತಿ ಆಗಲಿದೆ ಎಂದು ಬಿಜೆಪಿ ಮುಖಂಡ ಬಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net