ಹಳ್ಳಿಗಳಿಗೆ ಬಸ್ ಸಂಚಾರ ಪುನರಾರಂಭಿಸಿ

23 smg 2
Published on

ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ಗ್ರಾಮಾಂತರ ಭಾಗಕ್ಕೆ ಸ್ಥಗಿತಗೊಂಡಿದ್ದ ಕೆಎಸ್​ಆರ್​ಟಿಸಿ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಕಮಿಟಿ ನೇತೃತ್ವದಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿನ ಹಲವು ಹಳ್ಳಿಗಳ ಗ್ರಾಮಸ್ಥರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ, ಮಡಿಕೆ ಚೀಲೂರು, ಕ್ಯಾತಿನಕೊಪ್ಪ, ಬಸವನಗಂಗೂರು, ಬೆಳಲಕಟ್ಟೆ, ಸೋಮಿನಕೊಪ್ಪ, ಭೋವಿ ಕಾಲನಿ, ಭದ್ರಾವತಿ ತಾಲೂಕಿನ ಗುಡಮಗಟ್ಟ, ಕಲ್ಲಳ್ಳಿ ತಡಸ ಮೊದಲಾದ ಗ್ರಾಮಗಳಿಗೆ ಬಸ್ ಸಂಪರ್ಕವಿಲ್ಲ. ಕೋಟೆಹಾಳ ಮತ್ತು ಮರಿಗೊಂಡನಕೊಪ್ಪದಲ್ಲಿ ನೆಪಮಾತ್ರಕ್ಕೆ ಬಸ್ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಕರೊನಾ ಮಾರ್ಗಸೂಚಿಯಲ್ಲಿ ಅವಕಾಶವಿದ್ದರೂ ಕೆಲ ಹಳ್ಳಿಗಳಲ್ಲಿ ಇನ್ನೂ ಬಸ್ ಸಂಪರ್ಕ ಕಲ್ಪಿಸುತ್ತಿಲ್ಲ. ಇದರಿಂದ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ಅಂಗವಿಕಲರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಡಿಸಿ ಕೆ.ಬಿ.ಶಿವಕುಮಾರ್ ಮತ್ತು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್.ನವೀನ್​ಕುಮಾರ್​ಗೆ ಮನವಿ ಸಲ್ಲಿಸಿದರು.

ರಾಜ್ಯ ಕಮಿಟಿಯ ಕೆ.ನಾಗರಾಜ್, ಎಸ್.ಕೆ.ಗಜೇಂದ್ರಸ್ವಾಮಿ, ಆರ್.ರಮೇಶ್, ಜಿಲ್ಲಾ ಮುಖಂಡರಾದ ಎಸ್.ವಿ.ದಯಾನಂದ್, ಎಸ್.ರಮೇಶ್, ಎ.ವಿ.ನಾಗರಾಜ್, ಎಸ್.ಅಣ್ಣಪ್ಪ, ಆರ್.ಸುಜಾತಾ, ಜಯಮಾಲಾ ಶೆಟ್ಟಿ, ಸುಜಾತಾ, ವಿನೋದ್, ಡಿ.ಎಸ್.ಮಲ್ಲಿಕಾರ್ಜುನ್, ಉಷಾ, ಫರ್ವಿನ್, ರವಿ, ಮಾರುತಿ, ಸಂದೀಪ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net