ಹಳ್ಳಿಗಳಲ್ಲಿ ಹೆಚ್ಚಿದ ಕರೊನಾ, ಅಖಾಡಕ್ಕಿಳಿದ ಟಾಸ್ಕ್ ಫೋರ್ಸ್ ಸಮಿತಿ, ಕರೊನಾ ವಿರುದ್ಧ ಗ್ರಾಮ ಮಟ್ಟದ ಕಾರ್ಯಪಡೆ ಸಮರ

IMG-20210517-WA0063
Published on

ವಿಜಯಪುರ: ಗ್ರಾಮೀಣ ಮಟ್ಟದಲ್ಲಿ ಹೆಚ್ಚುತ್ತಿರುವ ಕರೊನಾ ವಿರುದ್ಧ ಗ್ರಾಮ ಮಟ್ಟದ ಕಾರ್ಯಪಡೆ ಸಮರ ಸಾರಿದ್ದು, ಪ್ರತೀ ಗ್ರಾಪಂ‌ ಮಟ್ಟದಲ್ಲಿ ಸಭೆ ಸೇರಿ‌ ಕಾರ್ಯ ಯೋಜನೆ ರೂಪಿಸುತ್ತಿದೆ.

ಜಿಲ್ಲಾದ್ಯಂತ ಸೋಮವಾರ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆದಿದ್ದು, ಗ್ರಾಮಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಮತ್ತು ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರು ಇದೀಗ ಹೊಸ ಯೋಜನೆಯೊಂದಿಗೆ ಅಖಾಡಕ್ಕಿಳಿದಿದ್ದಾರೆ.

ಸದರಿ ಕಾರ್ಯಪಡೆಯಲ್ಲಿ ಪಿಡಿಒ,‌ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಆರೋಗ್ಯ ಸಹಾಯಕಿಯರು, ಅಂಗನವಾಡಿ ಮತ್ತು ಆಶಾ‌ಕಾರ್ಯಕರ್ತೆಯರು, ಶಿಕ್ಷಕರು, ಪೊಲೀಸ್ ಬೀಟ್ ಮುಂತಾದವರಿದ್ದಾರೆ. ಇವರೆಲ್ಲ ಸಭೆ ಸೇರಿ ಗ್ರಾಮದ ಸ್ಥಿತಿಗತಿ ಅವಲೋಕಿಸಿ ಕೈಗೊಳ್ಳಬೇಕಾದ ಕಾರ್ಯ ಗಳ ಬಗ್ಗೆ ಸಮಾಲೋಚಿಸಿ ಮುಂದಡಿಯಿಟ್ಟಿದ್ದಾರೆ.

ಗ್ರಾಮದಲ್ಲಿ ಪ್ರತೀ ಮನೆ‌ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಿಸಲಾಗುತ್ತಿದೆ, ಮನೆಯಲ್ಲಿ ಐಸೋಲೇಟ್ ಆಗಲು ಸಾಧ್ಯವಾಗದವರಿಗೆ ಸರ್ಕಾರಿ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ,

ಎಲ್ಲೆಡೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಮಾಸ್ಕ್ ಹಂಚುವುದು, ಪರಸ್ಪರ ಅಂತರ ಕಾಯ್ದುಕೊಳ್ಳಲು ಮನವರಿಕೆ ಮಾಡಲಾಗುತ್ತಿದೆ. ವಲಸೆ ಬಂದವರನ್ನು ಗುರುತಿಸಿ ಗೃಹ ಆರೈಕೆ ಪಡೆಯಲು ಸೂಚಿಸಲಾಗುತ್ತಿದೆ. ಗ್ರಾಮದಲ್ಲಿ ಸಾಮೂಹಿ‌ ಕಾರ್ಯಕ್ರಮಗಳ ನಿಷೇಧ, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಈ ಎಲ್ಲ ಯೋಜನೆಗಳಿಗೆ ಜಿಪಂ ಸಿಇಒ ಗೋವಿಂದ ರೆಡ್ಡಿ ಹಾಗೂ ಡಿಎಸ್ ಸಿ.ಬಿ. ದೇವರಮನಿ ಮಾರ್ಗದರ್ಶನ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net