ಹಳ್ಳಿಗಳ ಹದಗೆಟ್ಟ ರಸ್ತೆ ದುರಸ್ತಿ

13 lxr 1
Published on

ಲಕ್ಷ್ಮೇಶ್ವರ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪ್ರವಾಹ, ಕರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಹತ್ತಾರು ಜನಪರ ಯೋಜನೆಗಳನ್ನು ರೂಪಿಸುವ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ ಜನರ ಮನ ಗೆದ್ದಿವೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿವೆ. ಕ್ಷೇತ್ರದ ಹಳ್ಳಿಗಳ ಹದಗೆಟ್ಟ ರಸ್ತೆಗಳ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆ ಗಮನಕ್ಕೆ ತರಲಾಗಿದೆ. ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪಿಡಬ್ಲ್ಯುಡಿ ಸಹಾಯಕ ಇಂಜಿನಿಯರ್ ಎಚ್.ವಿ. ಹೊಸಮನಿ ಮಾಹಿತಿ ನೀಡಿ, ಪುಟಗಾಂವ್ ಬಡ್ನಿ-ಮಾಗಡಿ ಮಾರ್ಗದ ಆಯ್ದ ಭಾಗಗಳಲ್ಲಿ ಒಟ್ಟು 4 ಕಿ.ಮೀ. ರಸ್ತೆ ಡಾಂಬರೀಕರಣವನ್ನು 151.80 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಲಾಗುವುದು. ರಸ್ತೆ ಕಾಮಗಾರಿ ವೇಳೆ ಈ ಭಾಗದ ರೈತರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ತಾಪಂ ಸದಸ್ಯ ಪರಶುರಾಮ ಇಮ್ಮಡಿ, ಗ್ರಾಪಂ ಅಧ್ಯಕ್ಷ ಸೋಮಶೇಖರಯ್ಯ ಶಿಗ್ಲಿಮಠ, ಕಲ್ಲಪ್ಪ ಹಡಪದ, ಮಲ್ಲಪ್ಪ ಲಮಾಣಿ, ಮಹೇಶ ಲಮಾಣಿ, ಸೋಮಣ್ಣ ವಡವಿ, ಬಸಪ್ಪ ತಳವಾರ, ಪರಮೇಶ ಹತ್ತಾಳ, ಬಸಪ್ಪ ಕೊನೆಸಾಗರ, ವೆಂಕಟೇಶ ಪೂಜಾರ, ಚಂದ್ರಪ್ಪ ಗದ್ದಿ, ಸಿ.ಎಸ್. ಹೂಗಾರ, ಮಲ್ಲಪ್ಪ ತಳವಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net