ಹಳ್ಳಿಗಳ ಏಳಿಗೆಗೆ ಶ್ರಮಿಸೋಣ

5
ಹಿರೇಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ಚೇತನ ಅಂಗಡಿ ಮಾತನಾಡಿದರು. ಸ್ಮಿತಾ ಪಾಟೀಲ, ಸಿದ್ದಪ್ಪ ಹುಕ್ಕೇರಿ, ಬಸವರಾಜ ಕಡೇಮನಿ ಗಂಗಾಧರ ಅಗಸೀಮನಿ ಇದ್ದರು.
Published on

ಹಿರೇಬಾಗೇವಾಡಿ: ನಾವು ಬೆಳೆದು ಎಷ್ಟೇ ದೊಡ್ಡವರಾಗಿದ್ದರೂ ಹಳ್ಳಿಗಳ ಸುಧಾರಣೆಗೆ ಶ್ರಮಿಸಬೇಕು ಎಂದು ಉದ್ಯಮಿ ಚೇತನ ಅಂಗಡಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಜನ್ಮದಿನ ನಿಮಿತ್ತ ಸೋಮವಾರ ನೋಟ್​ಬುಕ್​ ಮತ್ತು ಪೆನ್​ ವಿತರಿಸಿ ಅವರು ಮಾತನಾಡಿದರು. ದೇಶ ಕಟ್ಟಿದ ಮಹಾನ್​ ನಾಯಕರೆಲ್ಲ ಕಲಿತದ್ದು ಸರ್ಕಾರಿ ಶಾಲೆಗಳಲ್ಲೇ. ಇಲ್ಲಿ ಕಲಿಯುವ ಮಕ್ಕಳಿಗೆ ಸಕಾಲದಲ್ಲಿ ಪ್ರೋತ್ಸಾಹ ಮತ್ತು ನೆರವು ನೀಡಿದರೆ ಅವರ ಜೀವನ ಸುಧಾರಿಸುತ್ತದೆ ಎಂದರು.

ಗ್ರಾಪಂ ಅಧ್ಯೆ ಸ್ಮಿತಾ ಪಾಟೀಲ, ಸದಸ್ಯ ಸಿದ್ದಪ್ಪ ಹುಕ್ಕೇರಿ, ಎಸ್​ಡಿಎಂಸಿ ಅಧ್ಯ ಗಂಗಾಧರ ಅಗಸೀಮನಿ, ಬಸವರಾಜ ಕಡೇಮನಿ, ಚಂದ್ರಕಾಂತ ಸಂಗನಾಯ್ಕರ, ರಾಜು ಅರಳೀಕಟ್ಟಿ, ಮಂಜುನಾಥ ಕುಂಬಾರ, ಪ್ರವಿಣ ಈಳಿಗೇರ, ಬಸವರಾಜ ಅರಳೀಕಟ್ಟಿ, ಮಲ್ಲಿಕಾರ್ಜುನ ಗಟಿಗೆಣ್ಣವರ, ನವೀನ ತೋಟಗಿ, ಬಸನು ಸೊಪ್ಪಡ್ಲ, ಪ್ರಧಾನ ಗುರು ಡಿ.ವಿ.ಪೂಜಾರ, ಪ್ರೇಮಾ ಈಳಿಗೇರ, ಎಂ.ಬಿ. ರೊಟ್ಟಿ, ಎಸ್​.ಎಸ್​.ಗಲಬಿ, ಎಸ್​.ಬಿ.ಹಟ್ಟಿಹೊಳಿ, ಎಸ್​.ಎಸ್​.ಶೀಲಯ್ಯನವರಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net