ಹಳ್ಳಿಗಳ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ

01 Hg Photo
Published on


ಹಗರೆ : ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌರ್ಕಯ ಒದಗಿಸಲು ಅನುದಾನ ಬೇಕಾಗಿದ್ದು, ಅನುದಾನ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.


ಗ್ರಾಮ ಪಂಚಾಯಿತಿ ಹಾಗೂ ಸಹಕಾರ ಸಂಘಗಳಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಬಿಜೆಪಿ ಹೋಬಳಿ ಘಟಕದಿಂದ ಹಗರೆಯ ಕೃಷಿಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಲ್ಲರ ಪರಿಶ್ರಮದಿಂದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರಲ್ಲೂ ಹೊಂದಾಣಿಕೆ ಬಹುಮುಖ್ಯ. ಆಂತರಂಗದಲ್ಲಿ ಸಮನ್ವತೆ, ಪ್ರೀತಿ, ವಿಶ್ವಾಸ ಇರಬೇಕು. ಮಾದೀಹಳ್ಳಿ ಹೊಬಳಿಯ ಶಾಶ್ವತ ನಿರಾವರಿ ಯೋಜನೆಯಾದ ರಣಘಟ್ಟ ಯೋಜನೆ ಚಾಲ್ತಿಯಲ್ಲಿದೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.


ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಆನಂತಸುಬ್ಬರಾಯ ಮಾತನಾಡಿ, ಯಾರೋಬ್ಬರಲ್ಲೂ ಗುಣಕ್ಕೆ ಮತ್ಸರವಿರಬಾರದು. ರಾಜಕಾರಣಿಗಳಿಗೆ ಬದ್ಧತೆ ಇದ್ದರೆ ಮಾತ್ರ ಮುಂದವರೆಯಲು ಸಾಧ್ಯ ಎಂದು ತಿಳಿಸಿದರು.


ಬಿಜೆಪಿ ತಾಲೂಕು ಉಪಾಧ್ಯಕ್ಷ ಡಿಶಾಂತ್ ಕುಮಾರ್ ಮಾತನಾಡಿ, ಬಡವರು ಕಚೇರಿಗೆ ಬಂದರೆ ಅವರ ಕೆಲಸವನ್ನು ಮಾಡಿಕೊಡಬೇಕಾಗಿರುವುದು ಜನಪತ್ರಿನಿಧಿಗಳ ಕರ್ತವ್ಯ. ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಹಗರೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಂದೇಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ, ಹಗರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂತರಾಜು, ಮಲ್ಲಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ್, ಸದಸ್ಯ ರಾಜಯ್ಯ, ಪುಷ್ಪಾ, ಬಿಜೆಪಿ ಮುಖಂಡ ವಿಷ್ಣುಕುಮಾರ್, ಪ್ರದೀಪ್, ಛಲವಾದಿ ಪುಟ್ಟರಾಜು, ಎಸ್.ಗೌಡ, ರಘು, ಭರತ್, ನವೀನ್, ಜೆಡಿಎಸ್ ಹೊಬಳಿ ಅಧ್ಯಕ್ಷ ಆನಂದ್,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net