ಹಳ್ಳಿಗಳ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಮಾತ್ರ : ಶ್ರದ್ಧಾ ಅಮಿತ್

ಹಳ್ಳಿಗಳ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಮಾತ್ರ : ಶ್ರದ್ಧಾ ಅಮಿತ್
Published on

ಹಾಸನ: ಮಹಿಳಾ ಸಬಲೀಕರಣಕ್ಕಾಗಿ ಆರ್ಥಿಕ ಸ್ವಾವಲಂಬಿಯಾಗಿರುವ ವಿವಿಧ ಯೋಜನೆಗಳನ್ನು ಜಾರಿ ಮಾಡಲು ಸಂಸ್ಥೆ ಸದಾ ಬದ್ಧವಿದೆ ಎಂದು ಬೆಂಗಳೂರು ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ತಿಳಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಮಹಿಳಾ ಸಮಾವೇಶ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಗಳ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಮಾತ್ರ ದೇಶಾಭಿವೃದ್ಧಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಜ್ಞಾನವಿಕಾಸ ಯೋಜನೆಯಡಿ ಮಹಿಳಾ ಸದಸ್ಯರಿಂದಲೇ ಮದ್ಯವರ್ಜನೆ, ಸ್ವಸಹಾಯ ನಿರ್ವಹಣಿ, ಸದಸ್ಯರ ಮೂಲಕ ಮಾಹಿತಿ ಕಲೆ ಹಾಕಿ ಸಂಘದ ಆರ್ಥಿಕ ಅಬಲರಿಗೆ, ನಿರಾಶ್ರಿತರಿಗೆ ವಾತ್ಸಲ್ಯ ಯೋಜನೆ ಮೂಲಕ ಮನೆ, ಹೊದಿಕೆ, ಮಾಸಾಶನ, ವಿದ್ಯಾರ್ಥಿ ವೇತನ, ಆರೋಗ್ಯ ಶಿಬಿರ, ಸಿರಿಧಾನ್ಯ ಜಾಗೃತಿ, ಕೃಷಿ ಮಾಹಿತಿಯಂತಹ ಹಲವಾರು ಯೋಜನೆಗಳ ಮಾಹಿತಿ ನೀಡಲಾಗುತ್ತಿದೆ ಅದನ್ನು ಸದುಪಯೋಗ ಪಡೆಸಿಕೊಳ್ಳವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಜ್ಞಾನವಿಕಾಸ ವಿಭಾಗದ ನಿರ್ದೇಶಕ ವಿಠ್ಠಲ್ ಪೂಜಾರಿ , ಲಹರಿ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕಿ ವೇದಾವತಿ.ಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net