

ಚಿತ್ರದುರ್ಗ: ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಜನತಾ ಸ್ವರಾಜ್ಯ ಸಂಘಟನೆ ಅಧ್ಯಕ್ಷ ಎಂ.ಎಚ್.ಶಶಿಧರ್ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ ರು,ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟು ಹೋರಾಟ ನಡೆಸಲಾಗುವುದು. ಮಹಿಳೆ,ಮಕ್ಕಳ ಹಕ್ಕುಗಳ ಉಲ್ಲಂಘನೆ,ದೌರ್ಜನ್ಯ,ದಬ್ಬಾಳಿಕೆಗಳ ವಿರುದ್ಧ ಹೋರಾಟ ನಡೆಸಿ ಸರ್ಕಾರಗಳ ಕಣ್ಣು ತೆರೆಸುವುದು ಸಂಘಟನೆಯ ಮುಖ್ಯಉದ್ದೇಶವೆಂದ ರು.
ಪ್ರಧಾನ ಕಾರ‌್ಯದರ್ಶಿ ಎಂ.ಮಂಜುನಾಥ್‌ಕಳ್ಳಿಹಟ್ಟಿ ಅವರು ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ನಮ್ಮ ಈ ಸಂಘಟನೆ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ನಡೆಸುತ್ತಿದೆ. ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ,ಹಿಂದುಳಿದವರು,ಅಲ್ಪಸಂಖ್ಯಾತರು, ಶೋಷಿತರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಗುರಿಯಾಗಿದೆ ಎಂದರು. ಬಿ.ಎನ್.ಅಜಯ್‌ಬಾಬು,ಲಲಿತಾಕೃಷ್ಣಮೂರ್ತಿ ಇದ್ದರು.