ಹಳ್ಳಿಖೇಡ ಸಮಗ್ರಹ ಅಭಿವೃದ್ಧಿಗೆ ಆದ್ಯತೆ

14-6hbd1....
Published on

ಹುಮನಾಬಾದ್: ಸತತ ಪ್ರಯತ್ನದೊಂದಿಗೆ ಹಳ್ಳಿಖೇಡ(ಬಿ) ಗ್ರಾಪಂನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಅದಕ್ಕೆ ತಕ್ಕಂತೆ ಸೌಲಭ್ಯ ಹಾಗೂ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.
ಹಳ್ಳಿಖೇಡ(ಬಿ)ದಲ್ಲಿ ಪುರಸಭೆಯ ನೂತನ ಕಟ್ಟಡ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿರುವ ಹುಮನಾಬಾದ್, ಚಿಟಗುಪ್ಪ ಪುರಸಭೆಗೆ ನೀಡುವಷ್ಟೇ ಆದ್ಯತೆ ನೂತನ ಪುರಸಭೆಗೂ ನೀಡಲಾಗುವುದು ಎಂದರು. ಗ್ರಾಪಂನಿಂದ ಪುರಸಭೆಯಾಗಿ ಮಾರ್ಪಾಡಾದ ನಂತರ ಚುನಾವಣೆ ನಡೆದರು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಾಗದ ಕಾರಣ ಆಡಳಿತ ಅಧಿಕಾರಿ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ. ಸ್ವತಂತ್ರಧಿಕಾರದಿಂದ ಎಲ್ಲರಿಗು ಸೌಲಭ್ಯ ಹಾಗು ಪಟ್ಟಣದ ಅಭಿವೃದ್ದಿಗೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ತಿಳಿಸಿದ್ದೆನೆ ಎಂದರು.
ಪುರಸಭೆಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಕಟ್ಟಡದ ಕೊರತೆ ಇರುವುದನ್ನು ಗಮನಿಸಿ, 1.63 ಕೋಟಿ ರೂ. ಅನುದಾನದಲ್ಲಿ ಕಚೇರಿ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ.
2019-20ರ 14ನೇ ಹಣಕಾಸು ಯೋಜನೆ 78 ಲಕ್ಷ ಹಾಗೂ 2019-20ನೇ ಸಾಲಿನ 14ನೇ ಹಣಕಾಸು ಯೋಜನೆ ಅಡಿ 60 ಲಕ್ಷ, ಚರಂಡಿ, ರಸ್ತೆ ಸೇರಿ ವಿವಿಧ ಕಾಮಗಾರಿ ನಡೆಯುತ್ತಿವೆ. ನಗರೋತ್ಥಾನ ಯೋಜನೆಯಡಿ 8.62 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತ್ತಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net