ಹಳ್ಳಿಕಾರ್ ತಳಿಯ ಎತ್ತುಗಳ ಪ್ರದರ್ಶನ

6BANNU1
ಬನ್ನೂರಿನ ಹೇಮಾದ್ರಾಂಬ ಜಾತ್ರೆಯ ಅಂಗವಾಗಿ ಡಾ. ರಾಹುಲ್‌ಗೌಡ ಹಳ್ಳಿಕಾರ್ ತಳೀಯ ಎತ್ತುಗಳ ಪ್ರದರ್ಶನ ಏರ್ಪಡಿಸಿರುವುದು.
Published on

ಬನ್ನೂರು: ದೇಸಿ ತಳಿಯ ರಾಸುಗಳನ್ನು ಉಳಿಸಲು ಗಂಗಸೇನೆಯನ್ನು ನಿರ್ಮಿಸಿಕೊಂಡು, ರೈತರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಡಾ. ರಾಹುಲ್‌ಗೌಡ ಅವರು ಹೇಮಾದ್ರಾಂಬ ಜಾತ್ರೆಯಲ್ಲಿ ಹಳ್ಳಿಕಾರ್ ತಳಿಯ ಎತ್ತುಗಳ ಪ್ರದರ್ಶನ ಏರ್ಪಡಿಸಿದ್ದು, ನೂರಾರು ರೈತಾಪಿ ವರ್ಗದವರು ಮಾಹಿತಿ ಪಡೆಯುತ್ತಿದ್ದಾರೆ.

ಮೂಲತಃ ವೈದ್ಯರಾಗಿರುವ ರಾಹುಲ್‌ಗೌಡ ರಾಸುಗಳ ಮೇಲೆ ಪ್ರೀತಿ ಹೊಂದಿದ್ದಾರೆ. ಈ ಬಾರಿ ಹೇಮಾದ್ರಾಂಬ ಜಾತ್ರೆಯಲ್ಲಿ ರಾಸುಗಳ ಪರಿಷೆಯಿಲ್ಲದಿದ್ದರೂ ರೈತರಿಗೆ ಹಳ್ಳಿಕಾರ್ ತಳಿಯ ಎತ್ತುಗಳು ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕದ ಜಾಗದಲ್ಲಿ ಪ್ರದರ್ಶನ ಏರ್ಪಡಿಸಿದ್ದಾರೆ. ದೇಸಿ ತಳಿಗಳ ಉಳಿಯುವಿಕೆಗಾಗಿ ಪ್ರಯತ್ನಿಸಬೇಕೆನ್ನುವ ಇವರು ಹತ್ತಾರು ಜೊತೆ ಹಳ್ಳಿಕಾರ್ ತಳಿಯ ರಾಸುಗಳನ್ನು ಪೋಷಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net