ಹಳ್ಳಿ ಸಂಸ್ಕೃತಿ ಕಣ್ಮರೆಯಾಗುತ್ತಿದೆ:ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ

ಹಳ್ಳಿ ಸಂಸ್ಕೃತಿ ಕಣ್ಮರೆಯಾಗುತ್ತಿದೆ:ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ
Published on

ಹಾಸನ: ಆಧುನಿಕತೆ ಬೆಳೆದಂತೆ ಗ್ರಾಮೀಣ ಪ್ರದೇಶಗಳು ನಗರಗಳಾಗಿ ಪರಿವರ್ತನೆಯಾಗುತ್ತಿದ್ದು, ಮೊದಲಿನ ಹಳ್ಳಿ ಸಂಸ್ಕೃತಿ ಕಣ್ಮರೆಯಾಗುತ್ತಿದೆಯೆಂದು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ.ಪುಟ್ಟಸ್ವಾಮಿ ಅವರು ಹೇಳಿದರು.
ನಗರ ಸಮೀಪದ ಕೋರವಂಗಲದ ಸಮುದಾಯ ಭವನದಲ್ಲಿ ಹಸಿರು ಭೂಮಿ ಪ್ರತಿಷ್ಟಾನ, ಗ್ರಾಮ ಸ್ವರಾಜ್ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ದೇವಸ್ಥಾನ, ರಂಗ ಮಂದಿರ, ಕಲ್ಯಾಣಿ ನೋಡಿದರೆೆ ಬಾಲ್ಯ ನೆನಪಿಗೆ ಬರುತ್ತದೆ. ಊರಲ್ಲಿ ಜಾತ್ರೆ, ಹಬ್ಬಗಳು ಬಂದರೆ ವಿಶೇಷ ವಾತಾವರಣ ನಿರ್ಮಾಣವಾಗುತ್ತಿತ್ತು. ಆದರೆ ಇಂದು ಎಲ್ಲರೂ ನಗರವನ್ನೇ ಇಷ್ಟಪಡುತ್ತಿದ್ದಾರೆ. ಉದ್ಯೋಗ ಅರಸಿ ಪಟ್ಟಣ ಸೇರುವ ಯುವಕರು ಅತಿಥಿಗಳಂತೆ ವರ್ಷಕ್ಕೊಮ್ಮೆ ಹುಟ್ಟಿದ ಊರಿಗೆ ಬರುತ್ತಿದ್ದಾರೆ. ಇದರಿಂದ ಹಳ್ಳಿಗಳು ಸೌಂದರ್ಯ ಕಳೆದುಕೊಳ್ಳುತ್ತಿವೆ ಎಂದರು.
ಹಾಸನ ಸುತ್ತಲಿನ ಗ್ರಾಮಗಳೆಲ್ಲ ನಗರಕ್ಕೆ ಸೇರಿವೆ. ಜಮೀನು ನಿವೇಶನಗಳಾಗಿ ಮಾರ್ಪಟ್ಟಿವೆ. ಮರಗಿಡಗಳು ನಾಪತ್ತೆಯಾಗಿವೆ. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕೆಂದರೆ ಮರಗಿಡಗಳ ಬೆಳೆಸಬೇಕೆಂದು ಸಲಹೆ ನೀಡಿದರು.
ಹಸಿರುಭೂಮಿ ಪ್ರತಿಷ್ಟಾನ ಅಧ್ಯಕ್ಷ ವೆಂಕಟೇಗೌಡ, ಉಪಾಧ್ಯಕ್ಷ ಡಾ. ಮಂಜುನಾಥ್, ಪುರುಷೋತ್ತಮ್, ಕಾರ್ಯದರ್ಶಿ ಗಿರಿಜಾಂಬಿಕ, ಖಜಾಂಚಿ ಭವಾನಿ, ಶಿವಶಂಕರಪ್ಪ, ಟಿ.ಪಿ. ಮಂಜುನಾಥ್, ರಾಮೇಗೌಡ, ವೇಣುಗೋಪಾಲ್, ನಾಗೇಶ್, ಗ್ರಾಮ ಸ್ವರಾಜ್ ಸಮಿತಿ ಅಧ್ಯಕ್ಷ ಜಯರಾಮೇಗೌಡ, ಉಪಾಧ್ಯಕ್ಷ ಕೆ.ಸಿ.ಕರೀಗೌಡ, ಕೆ.ಪಿ.ಕುಮಾರಸ್ವಾಮಿ, ಕಾರ್ಯದರ್ಶಿ ವೈ.ಡಿ. ದೇವರಾಜು, ಜಂಟಿ ಕಾರ್ಯದರ್ಶಿ ನಿಂಗಯ್ಯ, ಅರವಿಂದ್, ಮಲ್ಲಶೆಟ್ಟಿ, ಶಿವಕುಮಾರ್, ಮಂಜಯ್ಯ, ರಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net