

ಹೊಸನಗರ: ಹಳ್ಳಿ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸೇರಿ ಯಾವುದೇ ನೆಟ್ವರ್ಕ್ ಇಲ್ಲದ ಕಾರಣ ಆನ್ಲೈನ್ ಶಿಕ್ಷಣ ಎಂಬುದು ಕುಗ್ರಾಮದ ಬಡ ಮಕ್ಕಳ ಪಾಲಿಗೆ ಗಗನ ಕುಸುಮ ಆಗಿದೆ ಎಂದು ತಾಪಂ ಸದಸ್ಯ ಚಂದ್ರಮೌಳಿ ದೂರಿದರು.
ವೀರೇಶ್ ಆಲುವಳ್ಳಿ ಅಧ್ಯಕ್ಷತೆಯಲ್ಲಿ ಗುರುವಾರ ಹ್ಮಮಿೊಂಡಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕೇಂದ್ರ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ನೆಟ್ವಕ್ ಸಮರ್ಪವಾಗಿ ಇಲ್ಲ. ಎಷ್ಟು ದೂರು ನೀಡಿದರೂ ಫಲ ಇಲ್ಲದ ಕಾರಣ ಕಚೇರಿಗೆ ಮುತ್ತಿಗೆ ಹಾಕುವ ಪ್ರಸಂಗ ಬಂದಿದೆ ಎಂದು ಎಚ್ಚರಿಸಿದರು. ಇದೇ ವಿಷಯವಾಗಿ ಹಲವು ಸದಸ್ಯರು ಬಿಸಿ ಚರ್ಚೆ ನಡೆಸಿದರು. ಕೊನೆಗೆ ಅಧ್ಯಕ್ಷರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಸೆಳೆಯá-ವುದಾಗಿ ಹೇಳಿದರು.
ಗ್ರಾಪಂ ಅಧಿಕಾರ ಮೊಟಕು:
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಜತೆ ಸರ್ಕಾರಿ ಭಾಗಿತ್ವದ ಔಚಿತ್ಯ ಕುರಿತು ಸದಸ್ಯರಾದ ಚಂದ್ರಮೌಳಿ ಹಾಗೂ ಏರಗಿ ಉಮೇಶ್ ತಕರಾರು ಮಾಡಿದರು. ಅಂತರ್ಜಲ ಹೆಚ್ಚಿಸುವುದಾಗಿ ಖಾಸಗಿ ಸಂಸ್ಥೆಯ ಜತೆಗೂಡಿದ ಸರ್ಕಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಬ್ಬರು ಸಂಯೋಜಕರನ್ನು ನೇಮಿಸಿದೆ. ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿದ್ದ ಕೆರೆ, ಬಾವಿ, ಕೃಷಿ ಹೊಂಡದಂತಹ ಕಾಮಗಾರಿಗಳು ಖಾಸಗಿ ಸಂಸ್ಥೆಗಳ ಪಾಲಾಗಿದೆ ಎಂದು ದೂರಿದರು.
ಸರ್ಕಾರದಿಂದ ಕೃಷಿ ಉಪಯೋಗಕ್ಕೆ ನೀಡಲಾಗುವು ಟಾರ್ಪಲಿನ್ಗಳು ವಾಹನ ಮಾಲೀಕರ ಪಾಲು ಆಗುತ್ತಿರುವ ಕಾರಣ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿತರಿಸುವಂತೆ ಸದಸ್ಯರು ಆಗ್ರಹ ಮಾಡಿದರು.
ಈ ಬಾರಿ ಮಳೆ ಉತ್ತಮ ಆಗಿರುವುದರಿಂದ ಸುಮಾರು 8,800 ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕೆಲಸ ಆರಂಭವಾಗಿದೆ. ಬೆಳೆ ವಿಮೆ ಹಣ ಇನ್ನ್ನೂ ಪಾವತಿ ಆಗಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಮಾಹಿತಿ ನೀಡಿದರು.
ಮಳೆ ಹಾನಿ ಪ್ರದೇಶದ ಸಮೀಕ್ಷೆಗೆ ಕೇವಲ ಅಧ್ಯಕ್ಷರು ಮಾತ್ರ ಹೋಗುತ್ತಿದ್ದಾರೆ. ಒನ್ ಮ್ಯಾನ್ ಶೋ’ ಬೇಡ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಆಯಾ ಪ್ರದೇಶದ ಸದಸ್ಯರನ್ನು ಒಳಗೊಂಡ ತಂಡ ಭೇಟಿ ನೀಡಿ, ಪರಿಹಾರ ಒದಗಿಸುವುದು ಸೂಕ್ತ ಎಂದು ಸದಸ್ಯ ಸುಬ್ರಹ್ಮಣ್ಯ ಸಲಹೆ ನೀಡಿದರು.